ಯಾದಗಿರಿ : ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದಲ್ಲಿ ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೆ.21ರಂದು ಯಾದಗಿರಿಯ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಾಪ್ ಮುಸಲ್ಮಾನರನ್ನ ಉಲ್ಲೇಖಿಸಿ ಆಕ್ರೋಶಭರಿತರಾಗಿ ಮಾತನಾಡಿದ್ದರು. ಹಲವೆಡೆ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟದ ಪ್ರವೃತ್ತಿ ನಡೆಯುತ್ತಿದೆ. ಮುಸ್ಲಿಂರಿಗೆ ಇಂತಹ ಪ್ರವೃತ್ತಿ ಯಾಕೆ ಬರುತ್ತೆ? ಹಿಂದೂಗಳೂ ಕೂಡ ಕೈಯಲ್ಲಿ ಕಲ್ಲು ಹಿಡಿದುಕೊಂಡರೆ ನಿಮ್ಮ ಕಥೆಯೇನಾಗುತ್ತೆ ಗೊತ್ತಿದೆಯೇ? ನ್ಯೂಕ್ಲಿಯರ್ ಬಾಂಬ್ ಮಾಡಿದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ ಬರಲ್ವಾ? ಎಂದು ಗುಡುಗಿದ್ದರು.
ಈ ಸಂಬಂಧಿತವಾಗಿ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ಸೇರಿದಂತೆ ಐವರ ವಿರುದ್ಧ ಬಿಎಎನ್ಎಸ್ 299, 192 ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
