Tuesday, March 31, 2026
Homebig breakingಮಹಿಳೆಯರನ್ನು ಮಂಚಕ್ಕೆ ಕರೆದ PSI? - ಪತಿ ವಿರುದ್ಧ ಆರೋಪಗಳ ಸುರಿಮಳೆಗೈದ ಪತ್ನಿ -‌ ನಿತ್ಯಾನಂದ...

ಮಹಿಳೆಯರನ್ನು ಮಂಚಕ್ಕೆ ಕರೆದ PSI? – ಪತಿ ವಿರುದ್ಧ ಆರೋಪಗಳ ಸುರಿಮಳೆಗೈದ ಪತ್ನಿ -‌ ನಿತ್ಯಾನಂದ ವಿರುದ್ಧ ಎಫ್‌ಐರ್..!

ಕಳಸ : ಕಳಸ ಪೊಲೀಸ್‌ ಠಾಣೆ ಪಿಎಸ್‌ಐ ನಿತ್ಯಾನಂದ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದ್ದು, ಪತ್ನಿಯೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳಸ ಪೊಲೀಸ್‌ ಠಾಣೆಯಯಲ್ಲಿ ಪಿಎಸ್‌ಐ ಆಗಿರುವ ಪತಿ ವಿರುದ್ಧ ಪತ್ನಿ ಅಮಿತಾ ದೂರು ನೀಡಿದ್ದು, ಎಫ್‌ಐಆರ್‌ ಕೂಡಾ ದಾಖಲಾಗಿದೆ. ಪತ್ನಿ ನೀಡಿರುವ ದೂರಿನಲ್ಲಿ ಏನಿದೆ ಅಂತ ನೋಡೋದಾದ್ರೆ, ಪತಿ ನಿತ್ಯಾನಂದ ಠಾಣೆಯಲ್ಲಿದ್ದುಕೊಂಡೇ ಮಹಿಳೆಯರನ್ನ ಮಂಚಕ್ಕೆ ಕರೆಯುತ್ತಾನೆ. ಠಾಣೆಗೆ ದೂರು ಕೊಡಲು ಬರುವ ಮಹಿಳೆಯರನ್ನ ದೈಹಿಕ ಸಂಪರ್ಕಕ್ಕಾಗಿ ಬಳಸಿಕೊಳ್ಳುತ್ತಾನೆ ಅಂತ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಆಗ ಮುಸ್ಲಿಂಮರು ಠಾಣೆಯಲ್ಲೇ ಆತನಿಗೆ ಹೊಡೆಯಲು ಹೋಗಿದ್ರು. ಬ್ರಹ್ಮಾವರದ ವಿವಾಹಿತ ಮಹಿಳೆ ಜೊತೆಯೂ ಅನೈತಿಕ ಸಂಪರ್ಕ ಹೊಂದಿದ್ದ. ಆಕೆಯ ಪೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ. ಬೆಂಗಳೂರಲ್ಲಿ ಮಹಿಳೆ ಜೊತೆ ಮಂಚದಲ್ಲಿ ಇರುವಾಗ ಸಿಕ್ಕಿಹಾಕಿಕೊಂಡಿದ್ದ
ಆಗಲೂ ಕೆಲಸ ಕಳೆದುಕೊಳ್ಳುವ ಮಟ್ಟಕ್ಕೆ ನಿತ್ಯಾನಂದ ಹೋಗಿದ್ದ. ಹೀಗೆ ಹಲವು ರೀತಿಯ ಗಂಭೀರ ಆರೋಪವನ್ನು ಮಾಡಿದ್ದಾರೆ.
ಕ್ವಾಟ್ರಸ್‌ನಲ್ಲಿ ನನ್ನ ಮೇಲೆ ಗಂಭೀರ ಹಲ್ಲೆ ಮಾಡಿದ್ದಾನೆ. ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದು, ಆತನ ಜೊತೆಗೆ ಸಂಬಂಧಿಕರು ಕೂಡಾ ಕೈಜೋಡಿಸಿದ್ದಾರೆ. ನನಗೆ ಈ ವಿಚಾರದಲ್ಲಿ ನ್ಯಾಯ ಬೇಕು ಅಂತ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!