Thursday, March 26, 2026
Homebig breakingಹಾಸನ, ಬೆಂಗಳೂರಿನಲ್ಲೂ ಇನ್ಮುಂದೆ ಪಬ್ಲಿಕ್‌ ಇಂಪ್ಯಾಕ್ಟ್‌ ಹವಾ..! - ನಮ್ಮ ತಂಡದ ಜೊತೆಯಾಗಲು ನಿಮಗೂ ಇದೆ...

ಹಾಸನ, ಬೆಂಗಳೂರಿನಲ್ಲೂ ಇನ್ಮುಂದೆ ಪಬ್ಲಿಕ್‌ ಇಂಪ್ಯಾಕ್ಟ್‌ ಹವಾ..! – ನಮ್ಮ ತಂಡದ ಜೊತೆಯಾಗಲು ನಿಮಗೂ ಇದೆ ಸುವರ್ಣಾವಕಾಶ..!

ಆತ್ಮೀಯ ಮಿತ್ರರೆ, ಒಂದು ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಜನಪರ ಸುದ್ದಿ ಮಾಧ್ಯಮವಾಗಿ ಗುರುತಿಸಿಕೊಂಡು ಜನಮಾನಸದಲ್ಲಿ ಛಾಪು ಮೂಡಿಸಿರುವ ಪಬ್ಲಿಕ್ ಇಂಪ್ಯಾಕ್ಟ್ ಈಗ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಳ್ಳುತ್ತಿದೆ. ಹಲವು ರೀತಿಯಲ್ಲಿ ಜನಾನುರಾಗಿ ಮಾಧ್ಯಮವಾಗಿ ಗುರುತಿಸಿಕೊಂಡು ಬೆಳೆಯುತ್ತಿರುವ ಪಬ್ಲಿಕ್‌ ಇಂಪ್ಯಾಕ್ಟ್‌ ಈಗ ರಾಜ್ಯ ರಾಜಧಾನಿಗೂ ಹೆಜ್ಜೆಯಿಡುತ್ತಿದೆ.
ಎಲ್ಲಾ ಕ್ಷೇತ್ರಗಳ ರಾಜಧಾನಿಯಂತಿರುವ ಬೆಂಗಳೂರಿನಲ್ಲೂ ತನ್ನ ಹೆಜ್ಜೆಗುರುತನ್ನು ಮೂಡಿಸಲು ಪಬ್ಲಿಕ್‌ ಇಂಪ್ಯಾಕ್ಟ್‌ ಅಣಿಯಾಗುತ್ತಿದೆ. ಬೆಂಗಳೂರು ಮಾತ್ರವಲ್ಲ ಹಾಸನನದಲ್ಲೂ ಪಬ್ಲಿಕ್‌ ಇಂಪ್ಯಾಕ್ಟ್‌ನ ಬ್ಯೂರೋ ಕಚೇರಿ ತೆರೆಯಲಾಗುತ್ತಿದೆ. ಈ ಸುಸಂದರ್ಭದಲ್ಲಿ ನಮ್ಮೊಂದಿಗೆ ನಿಮಗೂ ಸುಂದರ ಅವಕಾಶವನ್ನು ನಾವು ನೀಡುತ್ತಿದ್ದೇವೆ. ನುರಿತ, ಅನುಭವವುಳ್ಳ ಸೃಜನಶೀಲ ಕಂಟೆಂಟ್ ಎಡಿಟರ್‌ಗಳು, ವರದಿಗಾರರು, ಛಾಯಾಗ್ರಾಹಕರು, ವೀಡಿಯೋ ಎಡಿಟರ್ಸ್‌ ನಮ್ಮ ಬಲಿಷ್ಠ ತಂಡದ ಭಾಗವಾಗಬೇಕೆಂಬುದು ನಮ್ಮ ಇರಾದೆ. ಸಾಂಪ್ರದಾಯಿಕ ಶೈಲಿಯ ಜೊತೆಗೆ ಹೊಸತನದ ಸ್ಪರ್ಶ ನೀಡುವ ಸಾಮರ್ಥ್ಯ ಇರುವ ಉತ್ಸಾಹಿಗಳು, ಒಂದೊಳ್ಳೆ ತಂಡದ ಜೊತೆ ನಾನಿರಬೇಕು ಅನ್ನೋ ಮನೋಭಾವನೆ ನಿಮಗಿದ್ರೆ ನಮ್ಮ ಕುಟುಂಬದಲ್ಲಿ ನಿಮಗೆ ಅವಕಾಶವಿದೆ… ಆಸಕ್ತರು ಕರೆ ಮಾಡಬೇಕಾದ ಸಂಖ್ಯೆ ಇಲ್ಲಿದೆ 9916917520. ಈ ಸಂಖ್ಯೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಇನ್ಯಾಕೆ ತಡ, ನಾವು ಹೇಳಿದ ಅರ್ಹತೆ ನಿಮ್ಮಲ್ಲಿದ್ದರೆ ಈಗಲೇ ಒಂದು ಫೋನ್‌ ಕಾಲ್‌ ಮಾಡ್ಬಿಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!