ಇಡೀ ಕರುನಾಡನ್ನೇ ಬೆಚ್ಚಿ ಬೀಳಿಸಿ ವಿದೇಶಕ್ಕೆ ಹಾರಾಲು ಮುಂದಾಗಿದ್ದ ರಾಮೇಶ್ವರಂ ಕೆಫೆ ಬಾಂಬರ್ ರನ್ನು NIA ಪೊಲೀಸರು ಬಂಧಿಸಿದ್ದಾರೆ. ಮಾ. 1ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟವಾದ ಬಳಿಕ ಅಲರ್ಟ್ ಆಗಿದ್ದ ಎನ್‌ಐಎ, ಶಂಕಿತ ಉಗ್ರರ ಬೆನ್ನು ಹಿಂದೆ ಬಿದ್ದು ಕೊನೆಗೂ ಸೆರೆ ಹಿಡಿದಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ದೇಶದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರ ಜಾಡು ಪತ್ತೆ ಹಚ್ಚಲು ನಾನಾ ಕಸರತ್ತು ಮಾಡಲಾಗಿತ್ತು.
ಶಂಕಿತ ಉಗ್ರರ ಸೆರೆ ಹಿಡಿಯಲು NIA ಪೊಲೀಸರು 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ವೇಳೆ ಉಗ್ರ ಧರಿಸಿದ್ದ ಕ್ಯಾಪ್ ಮಹತ್ವದ ಸುಳಿವು ನೀಡಿತ್ತು. ಉಗ್ರ ಧರಿಸಿದ್ದ ಕ್ಯಾಪ್ ಎಲ್ಲಿ ಖರೀದಿಸಿದ್ದರು ಎಂಬುವುದರ ಹಿಂದೆ ತನಿಖಾ ದಳ ಬಿದ್ದಿತ್ತು. ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹ ಕಳೆದ 12 ದಿನಗಳಿಂದ ಕಲ್ಕತ್ತಾದ ಮಿಧಿನಾಪುರದ ಹಲವು ಲಾಡ್ಜ್ ನಲ್ಲಿ ಹಿಂದೂಗಳ ಹೆಸರಲ್ಲಿ ಮನೆ ಹಾಗೂ ಹೊಟೇಲ್ ಬಾಡಿಗೆ ಪಡೆದಿದ್ದರು.ಪಶ್ಚಿಮ ಬಂಗಾಳದ ಗಡಿ ಮೂಲಕ ಬಾಂಗ್ಲಾದೇಶಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದ ಬಲವಾದ ಶಂಕೆಯಿದೆ. ಅಷ್ಟರಲ್ಲಾಗಲೇ ಇಬ್ಬರೂ ಸೆರೆಸಿಕ್ಕಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣವನ್ನು NIA ಪೊಲೀಸರು ಗಂಭಿರವಾಗಿ ಪರಿಗಣಿಸಿ ಶಂಕಿತ ಉಗ್ರರನ್ನು ಸೆರೆ ಹಿಡಿದಕ್ಕೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಗೃಹ ಸಚಿವ ಜಿ ಪರಮೇಶ್ವರ್ ಸೇರಿ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಶಂಕಿತ ಉಗ್ರರಾದ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹರನ್ನು ಈಗಾಗಲೇ ಮೆಡಿಕಲ್ ಪರೀಕ್ಷೆಗೆ ಒಳಪಡಿಸಿ, ಬೆಂಗಳೂರಿನಲ್ಲಿ ಜಡ್ಜ್ ಮುಂದೆ ಹಾಜರು ಪಡಿಸಿದ್ದಾರೆ.
