ಬೆಂಗಳೂರು: ನಾವು ಈ ಹಿಂದೆ ಆರ್‌ಎಸ್‌ಎಸ್ ಅನ್ನು 2 ಬಾರಿ ಬ್ಯಾನ್ ಮಾಡಿದ್ದು. ನಂತರ ನಮ್ಮ ಕೈಕಾಲು ಹಿಡಿದಿದ್ದಕ್ಕೆ ನಾವು ನಿಷೇಧವನ್ನು ವಾಪಾಸ್ ಪಡೆದಿದ್ದೆವು.ಆದರೆ ಆಗ ನಿಷೇಧವನ್ನು ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್ ಎಸ್ ಎಸ್ ಬ್ಯಾನ್ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆರ್‌ಎಸ್‌ಎಸ್ ಸಿದ್ದಾಂತವನ್ನು ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರ್ ಎಸ್ ಎಸ್ ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆರ್ ಎಸ್ ಎಸ್ ಹುಟ್ಟಿದಾಗಿನಿಂದಲೂ ಜಾತ್ಯಾತೀತ, ಸಮಾಜವಾದ, ಸಮಾನತೆಗಳ ಬಗ್ಗೆ ಅಲರ್ಜಿ ಇದೆ. ಹಾಗಾಗಿ ನಾವು ಮೊದಲಿನಿಂದಲೂ ಅವರ ತತ್ವ ಸಿದ್ಧಾಂತಗಳನ್ನ ವಿರೋಧಿಸಿಕೊಂಡೇ ಬಂದವರು.

ಹಾಗೆ ಮುಂದೆಯೂ ಮಾಡುತ್ತೇವೆ. ದೇಶದಲ್ಲಿ ಒಬ್ಬರೇ ಇರಬೇಕು. ಒಂದೇ ಧರ್ಮವಿರಬೇಕು ಆರೆಸ್ಸೆಸ್ ಸಿದ್ಧಾಂತ. ಆದರೆ, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದ್ದಾರೆ.