ಬೆಂಗಳೂರು: ಹಾಸನದಲ್ಲಿ ಆಗುತ್ತಿರುವ ಸರಣಿ ಸಾವುಗಳು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದ್ದು ಈ ಹಿನ್ನೆಲೆಯಲ್ಲಿ ಇಡೀ ಆರೋಗ್ಯ ಇಲಾಖೆಯೇ ಫೀಲ್ಡ್‌ಗೆ ಇಳಿಯುವಂತೆ ಮಾಡಿದ್ದು, ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಆತಂಕ ವ್ತಕ್ತಪಡಿಸಿದ್ದರು. ಅದರಲ್ಲೂ ಬಾಣಂತಿ, ಯುವಕರು ಅಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆ ವೈದ್ಯನೇ ಹಾರ್ಟ್‌ಅಟ್ಯಾಕ್‌ಗೆ ಬಲಿ ಆಗಿದ್ದಾರೆ.

ಸಾವಿಗೆ ಕಾರಣ ಏನು ಅನ್ನೋದನ್ನ ತಿಳಿಯಲು ಬೆಂಗಳೂರಿನ ಜಯದೇವ ಆಸ್ಪತ್ರೆ ಮುಖ್ಯಸ್ಥರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. 10 ದಿನದಲ್ಲೇ ವರದಿ ನೀಡುವಂತೆ 12 ಜನ ತಜ್ಞರ ಸಮಿತಿಗೆ ಸರ್ಕಾರ ಸೂಚಿಸಿತ್ತು.
ಹೌದು… 42 ದಿನದಲ್ಲೇ 26 ಮಂದಿ ಬಲಿ ಆಗಿದ್ದು ಇನ್ನೂ ಕೂಡ ಸಾವುಗಳು ಸಂಭವಿಸುತ್ತಿದ್ದು ಹಾಗಾಗಿ ಸಾವಿನ ತನಿಖೆಗೆ ತಜ್ಞರ ಸಮಿತಿಯೂ ರಚಿಸಲಾಗಿದೆ. ಈ ಮಧ್ಯೆ ಹೃದಯಾಘಾತದ ಬಗ್ಗೆ ತಾಂತ್ರಿಕ ಸಮಿತಿ ಪ್ರಾಥಮಿಕ ವರದಿ ಸಿದ್ಧ ಪಡಿಸಿದ್ದು, ಇದೀಗ ವರದಿಯಲ್ಲಿ ಶಾಕಿಂಗ್ ಅಂಶಕಾರಿಯಿಂದು ಪತ್ತೆಯಾಗಿದೆ.
ಅತಿಯಾದ ಬೊಜ್ಜು, ಮಾಂಸ ಸೇವನೆ, ಧೂಮಪಾನ, ಮದ್ಯಪಾನ ಮತ್ತು ಫಾಸ್ಟ್ ಫುಡ್ ಸೇವನೆಯಿಂದ ಸಾವು ಸಂಭವಿಸಿರುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದು. ರೆಡ್ ಮೀಟ್ ಸೇವನೆಯಿಂದ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಆಳವಾದ ಅಧ್ಯಯನ ಮಾಡಲು ತಾಂತ್ರಿಕ ಸಮಿತಿ ನಿರ್ಧರಿಸಿದೆ.