
ದೆಹಲಿ : ಭಾರತ ಕ್ರಿಕೆಟ್ ತಂಡದ ಗಬ್ಬರ್ ಸಿಂಗ್ ಅಂತಾನೇ ಖ್ಯಾತಿ ಹೊಂದಿರುವ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಕುರಿತಾದ ತಮ್ಮ ಹೇಳಿಕೆಯನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಹಾಗೂ ದೇಸೀ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರೋದಾಗಿ ಅವರು ಪ್ರಕಟಿಸಿದ್ದಾರೆ.
ಓಪನಿಂಗ್ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಶಿಖರ್ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 50 ಓವರ್ ಹಾಗೂ ಟಿ20 ಪಂದ್ಯಗಳಲ್ಲಿ ಓಪನರ್ ಆಗಿ ಆಡಿದ್ದರು. ತಮ್ಮ ವಿಭಿನ್ನ ಹಾಗೂ ಆಕ್ರಮಣಕಾರಿ ಆಟದ ಮೂಲಕವೇ ಗುರುತಿಸಿಕೊಂಡಿದ್ದ ಇವ್ರು, ಡಿಫರೆಂಟ್ ಹೇರ್ ಸ್ಟೈಲ್ ಹಾಗೂ ಆಕರ್ಷಕ ಗಡ್ಡ, ಮೀಸೆ ವಿನ್ಸಾಸದ ಮೂಲಕ ಗಬ್ಬರ್ ಸಿಂಗ್ ಅಂತ ಕರೆಸಿಕೊಂಡಿದ್ರು. 2022ರಲ್ಲಿ ಬಾಂಗ್ಲಾದೇಶ ಎದುರು ತಮ್ಮ ಕೊನೆಯ ಪಂದ್ಯವನ್ನಾಗಿದ್ದು.
ನಂತರದಲ್ಲಿ ಫಾರ್ಮ್ ಕಳೆದುಕೊಂಡಿದ್ದ ಶಿಖರ್ ಧವನ್, ತನ್ನ ಎಂದಿನ ಆಟಕ್ಕೆ ಮರಳಲು ಸಾಕಷ್ಟು ಶ್ರಮ ಹಾಕಿದ್ದರು. ಆದರೆ ಫಾರ್ಮ್ ಕಂಡುಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ಸಫಲರಾಗಿರಲಿಲ್ಲ.
ಭಾರತದ ಪರ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ಶತಕ, 5 ಅರ್ಧಶತಕ ಸೇರಿದಂತೆ 2315 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 167 ಪಂದ್ಯಗಳನ್ನು ಆಡಿದ್ದು 6793 ರನ್ ಸಿಡಿಸಿದ್ದಾರೆ. 39 ಅರ್ಧಶತಕ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 68 ಬಾರಿ ಭಾರತದ ಪರ ಕಣಕ್ಕೆ ಇಳಿದಿದ್ದು, 11 ಅರ್ಧಶತಕ ಬಾರಿಸಿದ್ದಾರೆ. ಇದರಲ್ಲಿ 1759 ರನ್ ಸಿಡಿಸಿದ್ದಾರೆ.

ವಿದಾಯ ವೀಡಿಯೋದಲ್ಲೇನಿದೆ…
ವಿದಾಯ ಘೋಷಿಸಿ ಮಾಡಿರುವ ವೀಡಿಯೋದಲ್ಲಿ ಸಂಕ್ಷಿಪ್ತವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕಾಗಿ ಆಡಲು ಮನೆ ಬಿಟ್ಟಿ ಬಂದಾಗ ಇಡೀ ತಂಡವೇ ನನ್ನ ಕುಟುಂಬವಾಗಿತ್ತು ಎಂದಿದ್ದಾರೆ. ಭಾರತಕ್ಕಾಗಿ ಆಡಬೇಕೆಂಬುದು ನನ್ನ ಕನಸಾಗಿತ್ತು, ಅದು ಈಡೇರಿದೆ. ಇದಕ್ಕಾಗಿ ಹಲವರು ನನ್ನ ಬೆನ್ನಿಗೆ ನಿಂತಿದ್ದರು. ಅವರೆಲ್ಲರನ್ನು ಗಬ್ಬರ್ ಸಿಂಗ್ ಸ್ಮರಿಸಿದ್ದಾರೆ.
