ಶಿವಮೊಗ್ಗ : ತನ್ನ ವಿರುದ್ಧ ದೂರು ಸಲ್ಲಿಸಿದವರನ್ನು ಸಿದ್ದರಾಮಯ್ಯ ಅವರು ಬೀದಿಯಲ್ಲಿ ಹೋಗುವವರು ದೂರು ಕೊಟ್ಟಿದ್ದಾರೆ ಅಂತಾರೆ. ಬೀದಿಯಲ್ಲಿ ಹೋಗುವವರೇ ವೋಟು ಹಾಕಿ ನಿಮಗೆ ಅಧಿಕಾರ ಬಂದಿರೋದು ನೆನಪಿರಲಿ ಅಂತ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದಲ್ಲ ನಾಳೆ ಇನ್ನೊಬ್ಬರು ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ದೇಶದ್ರೋಹಿಗಳು ಅನ್ನುತ್ತಾರೆ. ದೇಶದ್ರೋಹಿಗಳು ಯಾರು ಅಂತಾ ದೇಶದ ಜನ ನಿರ್ಧರಿಸಿದ್ದಾರೆ. ಅದರ ಪರಿಣಾಮ
ನರೇಂದ್ರ ಮೋದಿ ಅವರನ್ನು 3 ನೇ ಬಾರಿ ಪ್ರಧಾನಮಂತ್ರಿ ಆಗಿ ಮಾಡಿದ್ದಾರೆ ಎಂದರು.
ಆಪರೇಷನ್ ಕಮಲ ಬಗ್ಗೆ ಗಣಿಗ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಾಖಲೆ ಮೂಲಕ ಆರೋಪ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹಾಕ್ತೇವೆ ಅಂತ ನಾಯಕರು ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಈ ರೀತಿ ಹೇಳಿದ್ದಾರೆ ಅಷ್ಟೇ ಅಂತ ಪ್ರತಿಕ್ರಿಯಿಸಿದ್ರು.


