ಗೋಣಿಕೊಪ್ಪ : ದೊಣ್ಣೆಯಿಂದ ಹೊಡೆದು ಮಗನೇ ತನ್ನ ತಂದೆಯನ್ನು ಹತ್ಯೆಗೈದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ಸಂಭವಿಸಿದೆ.
ಸಿ.ಎನ್. ನಾಣಯ್ಯ (70) ಎಂಬವರೇ ಮೃತ ವ್ಯಕ್ತಿ. ನಿನ್ನೆ ರಾತ್ರಿ ತಂದೆ ಮಗನ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದೆ. ಈ ವೇಳೆ ಅವರ ಮಗ ದೀಪು(45) ದೊಣ್ಣೆಯಿಂದ ತಂದೆಗೆ ಹೊಡೆದಿದ್ದು, ತೀವ್ರವಾಗಿ ಪೆಟ್ಟಾದ ನಾಣಯ್ಯ ಅವರು ಮೃತಪಟ್ಟಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





