Friday, March 27, 2026
Homebig breaking6 ತಿಂಗಳ ಬಳಿಕ ಮುಖಾಮುಖಿಯಾದ ಸುಬ್ಬ-ಸುಬ್ಬಿ | ಪವಿತ್ರಾ ಬೆನ್ನು ಸವರಿದ ದರ್ಶನ್‌ ಹೇಳಿದ್ದೇನು ಗೊತ್ತಾ..?

6 ತಿಂಗಳ ಬಳಿಕ ಮುಖಾಮುಖಿಯಾದ ಸುಬ್ಬ-ಸುಬ್ಬಿ | ಪವಿತ್ರಾ ಬೆನ್ನು ಸವರಿದ ದರ್ಶನ್‌ ಹೇಳಿದ್ದೇನು ಗೊತ್ತಾ..?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಬಳಿಕ ಮೊದಲ ಬಾರಿಗೆ ದರ್ಶನ್-ಪವಿತ್ರಾಗೌಡ ಮುಖಾಮಖಿ ಆಗಿದೆ. ಸರಿಸುಮಾರು 6 ತಿಂಗಳ ಬಳಿಕ ಇಬ್ಬರು ಎದುರು ಬದುರಾಗಿದ್ದಾರೆ. ಬೇಲ್ ಪಡೆದುಕೊಂಡ ಬಳಿಕ ಪ್ರಕರಣದ ವಿಚಾರಣೆಗಾಗಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ರು. ಇದೇ ವೇಳೆ ದರ್ಶನ್ ಹಾಗೂ ಪವಿತ್ರಾಗೌಡ ಕೂಡ ಕೋರ್ಟ್‌ಗೆ ಆಗಮಿಸಿದ್ರು. ಈ ಸಂದರ್ಭದಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಆರೋಗ್ಯವನ್ನ ಪವಿತ್ರಾಗೌಡ ವಿಚಾರಿಸಿದ್ದಾರೆ. ಆರೋಗ್ಯದ ಕಡೆ ಗಮನ ಇರಲಿ ಅನ್ನೋ ಕಾಳಜಿಯ ಮಾತನ್ನ ಕೂಡ ಪವಿತ್ರಾಗೌಡ, ದರ್ಶನ್‌ಗೆ ಹೇಳಿದ್ದಾರೆ. ಪವಿತ್ರಾಗೌಡ ಮಾತಿಗೆ ಹೆಚ್ಚು ಮಾತನಾಡದ ದರ್ಶನ್ ಖಂಡಿತವಾಗಿಯೂ ಆರೋಗ್ಯದ ಬಗ್ಗೆ ಕಾಳಜಿ ವಹಿಸ್ತೇನೆ, ಯೂ ಟೇಕ್ ಕೇರ್… ನೀನೂ ಕೂಡ ಆರೋಗ್ಯ ನೋಡಿಕೋ ಅಂದಿದ್ದಾರೆ.
ಈ ವೇಳೆ ಭಾವುಕರಾದ ಪವಿತ್ರಾಗೌಡಳನ್ನ ದರ್ಶನ್ ಬೆನ್ನುತಟ್ಟಿ ಸಂತೈಸಿದ ಪ್ರಸಂಗವೂ ನಡೆದಿದೆ. ಹೀಗೆ ಭಾವುಕರಾಗೋಕೆ ಕಾರಣ, ಇಷ್ಟೆಲ್ಲಾ ಆಗಿಬಿಡ್ತಲ್ಲ, ನಡೆಯಬಾರದೆಲ್ಲವೂ ನಡೆದು ಹೋಯ್ತಲ್ಲ, ಏನೋ ಮಾಡಲು ಹೋಗಿ ಜೈಲು ಶಿಕ್ಷೆ ಅನುಭವಿಸಬೇಕಾಯ್ತಲ್ಲ, ಇದೀಗ ವಿಚಾರಣೆ.. ಇನ್ನು ಇದು ಎಷ್ಟು ತಿಂಗಳು, ವರ್ಷ ನಡೆಯುತ್ತೆ ಗೊತ್ತಿಲ್ಲ.. ಏನಪ್ಪಾ ಇದೆಲ್ಲಾ ಕರ್ಮ ಅಂತಾ ನೆನೆದು ಭಾವುಕರಾದಂತೆ ಕಂಡುಬಂತು. ಹೀಗಾಗಿಯೇ ಈ ಸಂದರ್ಭದಲ್ಲಿ ದಚ್ಚು, ಏಯ್.. ಹುಚ್ಚಿ.. ತಲೆ ಕೆಡಿಸಿಕೊಳ್ಳಬೇಡ, ಆಗೋದೆಲ್ಲಾ ಆಗೋಗಿದೆ.. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು ಅನ್ನೋ ರೀತಿಯಲ್ಲಿ ಪವಿತ್ರಾಗೌಡ ಬೆನ್ನುತಟ್ಟಿ ಸಂತೈಸಿದಂತೆ ಕಂಡುಬಂತು..!
ಒಟ್ಟಿನಲ್ಲಿ ದಚ್ಚು-ಪವಿಯ ಈ ಮಾತುಕತೆ, ಸ್ಯಾಂಡಲ್‌ವುಡ್‌ನಲ್ಲಿ ಒಂದು ರೀತಿಯಾಗಿ ದೊಡ್ಡ ಸಂಚಲನವನ್ನೇ ಸೃಷ್ಠಿಮಾಡಿದೆ. ಇಬ್ಬರು ಜೈಲಿಗೆ ಹೋದ ಬಳಿಕ ಈ ರೀತಿಯಾಗಿ ಪರಸ್ಪರ ಭೇಟಿ ಆಗಿರಲಿಲ್ಲ. ಇವತ್ತು ಕೋರ್ಟ್‌ಗೆ ಬರ್ತಾರೆ ಅಂತಾ ಎಲ್ಲರಿಗೂ ಗೊತ್ತಿದ್ರೂ ಈ ರೀತಿ ಮುಖಾಮುಖಿ ಆಗ್ತಾರೆ. ಮುಂದುವರಿದು ಮಾತಾಡ್ತಾರೆ, ಇಬ್ಬರು ಆರೋಗ್ಯವನ್ನ ವಿಚಾರಿಸಿ ಕೊಳ್ತಾರೆ.! ದರ್ಶನ್, ಪವಿತ್ರಾಗೌಡಳ ಬೆನ್ನುತಟ್ಟಿ ಸಂತೈಸ್ತಾರೆ ಅನ್ನೋದನ್ನ ಯಾರೂ ಕೂಡ ಅಂದಾಜಿಸಲಿರಲಿಲ್ಲ. ದರ್ಶನ್, ಜೈಲಿಗೆ ಹೋಗಲು ಪ್ರತ್ಯಕ್ಷವಾಗಿ ಪವಿತ್ರಾಗೌಡಳೇ ಕಾರಣವಾಗಿರೋದ್ರಿಂದ, ದರ್ಶನ್‌ಗೆ ಪವಿತ್ರಾಗೌಡ ಮೇಲೆ ಕೋಪವಿರಬಹುದಾ.? ಸಿಟ್ಟು ಮಾಡ್ಕೋಬಹುದಾ..? ಅಂತಾ ಅನೇಕರು ಭಾವಿಸಿದ್ದರು. ಅಲ್ಲದೇ ಪವಿತ್ರಾಗೌಡಳ ಜೊತೆ ದರ್ಶನ್ ಮತ್ತೆ ಕ್ಲೋಸ್ ಆದ್ರೆ , ಅದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿಟ್ಟಿಗೆ ಕಾರಣವಾಗೋದಂತೂ ಪಕ್ಕಾ.! ಹಾಗಾಗಿ ದರ್ಶನ್, ಪವಿತ್ರಾಗೌಡಳನ್ನ ಅವಾಯ್ಡ್ ಮಾಡ್ತಾರೆ ಅಂತಾಲೂ ಎಲ್ಲರೂ ಭಾವಿಸಿದ್ರು. ಆದ್ರೆ ಎಲ್ಲರ ಲೆಕ್ಕಾಚಾರ ಕಂಪ್ಲೀಟ್ ಉಲ್ಟಾಪಲ್ಟಾ ಆಗಿದ್ದು, ದರ್ಶನ್ ಎಂದಿನಂತೆ, ಪವಿತ್ರಾಗೌಡಳನ್ನ ಕೋರ್ಟಲ್ಲಿ ಮಾತಾಡಿಸಿದ್ದಾರೆ, ಹೀಗಾಗಿಯೇ ದಚ್ಚು-ಪವಿಯ ಈ ಮಾತುಕತೆ ಬಗ್ಗೆ ಎಲ್ಲೆಡೆ ಚರ್ಚೆ ಆಗ್ತಿದ್ದು, ಬರೋಬ್ಬರಿ 6 ತಿಂಗಳ ಬಳಿಕ ಇಬ್ಬರ ನಡುವಿನ ಈ ಭೇಟಿ, ಇದೀಗ ಹೊಸ ಚರ್ಚೆಗೆ ಕಾರಣವಾಗಿರೋದಂತೂ ಸತ್ಯ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!