ಹಾಸನ ಸೇರಿದಂತೆ ಹಲವು ಕಡೆ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅದರಲ್ಲೂ ಹದಿಹರೆಯದ ವಯಸ್ಸಿನಲ್ಲೇ ಈ ರೀತಿ ಆಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾವಿಗೆ ಕಾರಣ ಪತ್ತೆ ಹಚ್ಚಲು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು ಹಾಗೆ ಇದರ ನಡುವೆ 15 ವರ್ಷದೊಳಗಿನ ಮಕ್ಕಳಿಗೆ ಹೃದಯ ತಪಾಸಣೆ ಮಾಡುವಂತೆ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಸಲಹೆ ನೀಡಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ರವೀಂದ್ರನಾಥ್, ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಶಶಿಭೂಷಣ್, ನಿಮ್ಹಾನ್ಸ್ ನಿರ್ದೇಶಕ ಡಾ. ಪ್ರಚೀತ್ ರಘುವೀರ್, ಬಿಎಂಆರ್‌ಸಿಐ ಮೆಡಿಸನ್ ವಿಭಾಗ ಮುಖ್ಯಸ್ಥ ಡಾ. ರವಿ, ನಿಮ್ಹಾನ್ಸ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ. ರವಿ ಅವರನ್ನು ಒಳಗೊಂಡ ಸಮಿತಿ ಹಲವು ಶಿಫಾರಸು ಮಾಡಿದೆ.
ಕೋವಿಡ್ ಸಮಸ್ಯೆ ಕಾಣಿಸಿಕೊಂಡವರಲ್ಲೂ ಕೊಂಚ ಹೃದಯದ ಸಮಸ್ಯೆ ಇದೆ ಎಂದು ವರದಿ ನೀಡಿದೆ. ಕೋವಿಡ್ ಲಸಿಕೆ ತೆಗೆದುಕೊಂಡ 250 ಮಂದಿ ಮೇಲೆ ಅಧ್ಯಯನ ಮಾಡಿ ಸಮಿತಿ ಈ ವರದಿ ಸಿದ್ಧಪಡಿಸಿದೆ.
ಮಕ್ಕಳ ಹೃದಯ ಪರೀಕ್ಷಿಸಿ
– 15 ವರ್ಷದ ಒಳಗಿನ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ
– 10ನೇ ತರಗತಿ ಮಕ್ಕಳಿಗೆ ಕಡ್ಡಾಯ ತಪಾಸಣೆಗೆ ಸೂಚನೆ
– ಮಕ್ಕಳ ಹೃದಯ ಬಡಿತ, ಹೈಪರ್ ಟೆನ್ಷನ್ ಪತ್ತೆ ಹಚ್ಚಬೇಕು
– ಹೃದಯ ರಿಸ್ಕ್ ಫ್ಯಾಕ್ಟರ್ಸ್ ಪತ್ತೆ ಮಾಡಬೇಕು
– ಮಕ್ಕಳಿಗೆ ಶಾಲೆಗಳಲ್ಲಿ ಸ್ಕ್ರೀನಿಂಗ್ ಮಾಡಬೇಕು
