ಚಿಕ್ಕಮಗಳೂರು :ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರುವ ಕಾರಣದಿಂದ ಇಂದಿನಿಂದ ಒಂದು ತಿಂಗಳ ಕಾಲ ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ ಬಿದ್ದಿದ್ದೆ.
ಈ ಕುರಿತು ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದ್ದು ಪ್ರವಾಸಿಗರ ಹಿತ ದೃಷ್ಟಿಯಿಂದ ಚಾರಣಕ್ಕೆ ನಿಷೇಧ ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ 7 ಕಿ.ಮೀ. ಚಾರಣ ಹೋಗಿ ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದರು. ಹಾಗೆ ರಾಜ್ಯದ ನಾನಾ ಭಾಗಗಳಿಂದ ಬರುತ್ತಿದ್ದ ಪ್ರವಾಸಿಗರು ಮಳೆಗಾಲ ಇದ್ದಿದ್ದರಿಂದ ಚಾರಣ ಮಾಡುವ ವೇಳೆ ಅನಾಹುತವಾದ್ರೆ ರಕ್ಷಣೆ ಮಾಡೋದು ಭಾರೀ ಕಷ್ಟವಾಗುತ್ತಿದ್ದು ಹಾಗೆ ಏನಾದರೂ ಅವಘಡ ಸಂಭವಿಸಿದ್ರೆ ಯಾವುದೇ ವಾಹನಗಳು ಹೋಗುವುದಿಲ್ಲ ಹೊತ್ತುಕೊಂಡು ತರಬೇಕು ಹಾಗೆ ಕಾಡುಪ್ರಾಣಿಗಳ ಕಾಟ ಈ ಕಾರಣದಿಂದ ಚಾರಣಕ್ಕೆ ಬ್ರೇಕ್ ಹಾಕಲಾಗಿದೆ.
ಆದೇಶದಲ್ಲಿ ಏನೇನಿದೆ?
ಮಳೆಗಾಲ ಸಂಧರ್ಭದಲ್ಲಿ ಭೂ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಚಾರಣ ಪ್ರದೇಶದಲ್ಲಿ ಹೆಚ್ಚು ಮಂಜು ಕವಿದ ವಾತಾವರಣ ಇದ್ದಿದ್ದು ಚಿಕ್ಕಮಹಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯ ಎತ್ತಿನಭುಜ ಚಾರಣಕ್ಕೆ ಬರುವ ಪ್ರವಾಸಿಗರು ಅಧಿಕವಾಗಿದ್ದು ಪ್ರಸಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಉಂಟಾಗುವ ದೃಷ್ಟಿಯಿಂದ ಜುಲೈ 1ರಿಂದ ಜುಲೈ 31ರವರೆಗೆ ಚಾರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಹಾಗೆ ಸ್ಥಳೀಯರು ಕೂಡ ಚಾರಣಕ್ಕೆ ಅವಕಾಶ ಕೊಡಬಾರದೆಂದು ಒತ್ತಾಯಿಸಲಾಗಿದೆ.