ಕುಶಾಲನಗರ(ಕೊಡಗು) : ಲಾರಿ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಗುಡ್ಡೆಹೊಸೂರುವಿನಲ್ಲಿ ನಡೆದಿದೆ.
ಸುಂಟಿಕೊಪ್ಪದ ಕಾರ್ಮಿಕ ರಾಜು ಮೃತ ವ್ಯಕ್ತಿ. ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಲಾರಿ ಮತ್ತು ಮಡಿಕೇರಿಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಲಾರಿ ಚಾಲಕ 7ನೇ ಹೊಸಕೋಟೆಯ ಜಬ್ಬಾರ್ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯಾಂಕರ್ – ಲಾರಿ ನಡುವೆ ಭೀಕರ ಅಪಘಾತ : ಓರ್ವ ದುರ್ಮರಣ..!
RELATED ARTICLES