ಶಿವಮೊಗ್ಗ : ಹಿಂದುಗಳ ಆರಾಧ್ಯ ದೈವ ಗಣಪತಿ ಮೆರವಣಿಗೆ ಮೆರವಣಿಗೆ ವೇಳೆ ಪಾಕಿಸ್ತಾನದ ಮನಸ್ಥಿತಿ ಇರುವವರು ಗಲಭೆ ಸೃಷ್ಟಿಸಿದ್ದಾರೆಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಸೀದಿ ಎದುರಿಗೆ ಮೆರವಣಿಗೆ ತೆಗೆದುಕೊಂಡು ಹೋಗಬಾರದು. ಮಸೀದಿ ಎದುರು ಡೊಳ್ಳು ಹೊಡೆಯಬಾರದು, ಮಂಗಳವಾದ್ಯ ನುಡಿಸಬಾರದೆಂದು ಕಲ್ಲು ಎಸೆದಿದ್ದಾರೆ. ಕೃತಕ ಬಾಂಬ್ ಎಸೆದು ರಾಷ್ಟ್ರದ್ರೋಹಿ ಕೃತ್ಯವೆಸಗಿದ್ದಾರೆಂದು ಕಿಡಿಕಾರಿದರು.
ದೇಶದಲ್ಲಿ ಈ ರೀತಿಯಾಗುವುದು ಕಡಿಮೆಯಾಗಿದೆ. ಆದರೆ ಕರ್ನಾಟಕದಲ್ಲಿ ಪಾಕಿಸ್ತಾನ ಮನಸ್ಥಿತಿ ಇರುವವರು ಈ ರೀತಿ ಬದುಕುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯಿಲ್ಲದೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆಯಿಲ್ಲದೇ ಎಲ್ಲಾ ರಾಷ್ಟ್ರಭಕ್ತರು ಇದನ್ನು ಖಂಡಿಸಬೇಕು. ಯಾರು ಈ ರೀತಿ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಅಂತ ಆಗ್ರಹಿಸಿದರು.
ಕರ್ನಾಟಕದಲ್ಲಿ ಪಾಕಿಸ್ತಾನ ಮನಸ್ಥಿತಿಯವರಿದ್ದಾರೆ – ಅಂಥವರಿಂದ ದೇಶದ್ರೋಹದ ಕೃತ್ಯ – ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಕ್ರೋಶ
RELATED ARTICLES