ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬಳಿಕ ಮೊದಲ ಬಾರಿಗೆ ಆರೋಪಿ ದರ್ಶನ್‌ನನ್ನ ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಕೆಯಾದ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಜತೆ ಮಾತನಾಡುವ ಇಂಗಿತವನ್ನು ದರ್ಶನ್ ವ್ಯಕ್ತಪಡಿಸಿದ್ದ. ಹೀಗಾಗಿ ಗುರುವಾರ ಸಂಜೆ 4.30ಕ್ಕೆ ಭೇಟಿ ಸಮಯ ನಿಗಧಿಯಾಗಿತ್ತು. ನಿಗಧಿಯ ಸಮಯಕ್ಕಿಂತ ಮುಂಚಿತವಾಗಿಯೇ ಆಗಮಿಸಿದ ವಿಜಯಲಕ್ಷ್ಮೀ ಜೈಲಿನ ಹೊರಭಾಗದಲ್ಲಿ ಕಾದರು. 4.30ಕ್ಕೆ ಅವರನ್ನು ಒಳಗೆ ಕರೆಸಿಕೊಂಡ ಅಧಿಕಾರಿಗಳು ಸಂದರ್ಶಕರ ಕೊಠಡಿಗೆ ಕಳುಹಿಸಿದರು. ಸ್ವಲ್ಪ ಸಮಯದ ಬಳಿಕ ಸೆಲ್‌ನಿಂದ ದರ್ಶನ್‌ನನ್ನು ಪೊಲೀಸರು ಕರೆದುಕೊಂಡು ಬಂದರು.
ಆತಂಕದಲ್ಲಿದ್ದಂತೆ ಕಂಡುಬಂದ ದರ್ಶನ್ ಸಂದರ್ಶಕರ ಕೊಠಡಿಗೆ ತೆರಳಿ ಪತ್ನಿ ಜತೆ ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದರು. ಈ ವೇಳೆ ದರ್ಶನ್‌ಗಾಗಿ ತಾವು ತಂದಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ವಿಜಯಲಕ್ಷ್ಮೀ ನೀಡಿದರು.
ಭೇಟಿ ವೇಳೆ ಕೈನಲ್ಲಿ ಕೆಲವು ದಾಖಲೆ ಪತ್ರಗಳನ್ನು ವಿಜಯಲಕ್ಷ್ಮೀ ಹಿಡಿದುಕೊಂಡಿದ್ದರು. ಜಾಮೀನು ಅರ್ಜಿಯ ಪತ್ರ ಅಂತ ಹೇಳಲಾಗಿದ್ದು, ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಆರೋಪಿಯ ಸಹಿಗಾಗಿ ಅದನ್ನು ತಂದಿದ್ದರು ಅಂತ ಹೇಳಲಾಗಿದೆ.
ಬಳ್ಳಾರಿ ಜೈಲಲ್ಲಿ ಆರೋಪಿ ದರ್ಶನ್‌ನನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ…
RELATED ARTICLES