ಬೆಂಗಳೂರು : ಜ್ಹೀರೊ ಫಿಗರ್ ಬಾಡಿ ಮೈಂಟೇನ್ ಮಾಡೋದು ಈಗಿನ ಟ್ರೆಂಡ್. ಹೊಟ್ಟೆ ಭಾಗ ಸಪುರವಾಗಿರ್ಬೇಕು ಅಂತೆಲ್ಲ ಯುವ ಸಮೂಹ ಅಂದುಕೊಂಡಿರ್ತಾರೆ. ಆದ್ರೆ ಬೊಜ್ಜು ಅನ್ನೋದು ಅವರ ಆಸೆಯನ್ನ ನಿರಾಸೆ ಮಾಡಿಬಿಡುತ್ತೆ.
ನಮ್ಮನ್ನು ಕಾಡುವ ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಸರಳ ಮನೆಮದ್ದು ಇಲ್ಲಿದೆ ನೋಡಿ. ದೈನಂದಿನ ವ್ಯಾಯಾಮ ಮಾಡುವುದರಿಂದ ಆರೋಗ್ಯ ಚೆನ್ನಾಗಿರುವುದರ ಜೊತೆಗೆ ದೇಹದಲ್ಲಿರುವ ಬೇಡವಾದ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತೆ. ಬೆಳಗ್ಗಿನ ಜಾವ ಆರೋಗ್ಯಕರ ಪಾನೀಯ ಸೇವಿಸುವುದರಿಂದ ಜೀರ್ಣಕ್ರಿಯೆ ಚನ್ನಾಗಿ ಆಗಿ ಬೇಡವಾದ ಕೊಬ್ಬು ಇಲ್ಲವಾಗುತ್ತದೆ.
ತೂಕ ಇಳಿಕೆಗೆ ಹಾಗೂ ಜೀರ್ಣಕ್ರಿಯೆಗೆ ಲಿಂಬೆ ರಸ ಅತ್ಯಂತ ಪ್ರಯೋಜನಕಾರಿ. ತೂಕ ಇಳಿಕೆಗೂ ಇದು ಸಹಕಾರಿಯಾಗಿದೆ. ಆ್ಯಂಟಿ ಆ್ಯಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಅಂಶ ಲಿಂಬೆ ರಸದಲ್ಲಿದ್ದು, ಆರೋಗ್ಯಕರ ತ್ವಚೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಲಿಂಬೆಯಲ್ಲಿರುವ ಆಮ್ಲೀಯತೆಯು ಉತ್ತಮ ಜೀರ್ಣಕ್ರಿಯೆ ಹಾಗೂ ಕರುಳಿನ ಸ್ವಚ್ಛತೆಯನ್ನು ಮಾಡುತ್ತದೆ. ಕೊಬ್ಬನ್ನು ಕರಗಿಸುವ ಶಕ್ತಿಯೂ ಲಿಂಬೆ ರಸಕ್ಕಿದೆ.
ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಾಕಿ ಅದರ ಜೊತೆಗೆ ಒಂದು ಚಮಚ ಜೇನು ತುಪ್ಪ ಬೆರೆಸಿ ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾ ಬಂದರೆ ದೆಹದಲ್ಲಿರುವ ಬೊಜ್ಜು ಕಡಿಮೆಯಾಗುವುದರ ಜೊತೆಗೆ ಉತ್ತಮ ಜೀರ್ಣಕ್ರಿಯೆಯು ನಡೆಯುತ್ತೆ.