ಚಿಕ್ಕಮಗಳೂರು : ನಿನ್ನೆ ಆರು ಮಂದಿ ನಕ್ಸಲರು ಸರ್ಕಾರಕ್ಕೆ ಶರಣಾದ ಬೆಳವಣಿಗೆಯನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಆದರೆ ಬಿಜೆಪಿ ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾಟಕ್ಕೆ ಠಕ್ಕರ್ ಕೊಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ವಿಭಿನ್ನವಾದ ಪೋಸ್ಟ್ ಮಾಡುವ ಮೂಲಕ ಹೊಸ ಅಭಿಯಾನ ಶುರುಮಾಡಿದ್ದಾರೆ.
ನಮ್ಮ ಮೇಲೂ ಹಲವು ಕೇಸ್‌ಗಳಿವೆ. ನಾವು ಕೂಡಾ ಶರಣಾಗುತ್ತೇವೆ, ನಮ್ಮ ಕೇಸ್‌ಗಳನ್ನ ವಾಪಸ್ ಪಡೆಯಿತು. ನಮಗೂ ಜಮೀನು ಕೊಡಿ, ಹಣ ಕೊಡಿ ಅಂತ ಸಿದ್ದರಾಮಯ್ಯ ಸರ್ಕಾರಕ್ಕೆ ವಿಭಿನ್ನ ರೀತಿಯ ಸವಾಲು ಹಾಕಿದ್ದಾರೆ. ಶಸ್ತ್ರಸಜ್ಜಿತವಾಗಿ ಕಾಡಿನಲ್ಲಿದ್ದುಕೊ೦ಡು ಹೋರಾಡುತ್ತಿದ್ದ ನಕ್ಸಲಿಯರ ಶರಣಾಗತಿಗೆ ಸರ್ಕಾರ ಪುನರ್ವಸತಿ ಹೆಸರಿನಲ್ಲಿ ಆರ್ಥಿಕ ನೆರವು, ಕೃಷಿಗಾಗಿ ಜಮೀನು ನೀಡುವುದು ಸೇರಿದಂತೆ ಮುಖ್ಯವಾಹಿನಿಯಲ್ಲಿ ಜೀವನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆಗಳನ್ನ ಮಾಡಿಕೊಡುವುದಾಗಿ ಹೇಳಿತ್ತು.
