ಚಿಕ್ಕಮಗಳೂರು : ಎರಡು ದಿನದ ಹಿಂದೆ ಕಾಫಿ ನಾಡಿನಲ್ಲಿ ನಡೆದ ಬೆಳೆಗಾರ ಮೇಲೆ ಉತ್ತರ ಭಾರತದ ಕಾರ್ಮಿಕರಿಂದ ಮಾರಣಾಂತಿಕ ಹಲ್ಲೆ ಪ್ರಕರಣ ಬೆಳೆಗಾರ ಸಮೂಹವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಹಲವು ಅಚ್ಚರಿಯ, ಆತಂಕಕಾರಿ ವಿಚಾರಗಳನ್ನು ಬೆಳೆಗಾರ ಕೀರ್ತಿರಾಜ್ ಬಿಚ್ಚಿಟ್ಟಿದ್ದಾರೆ.
ಅಂದು ಬೆಳಗ್ಗೆ ನಾನು ನನ್ನ ತೋಟದ ಕೆಲಸಕ್ಕೆಂದು ತೋಟದಂಚಿಗೆ ತೆರಳಿದ್ದೆ. ಈ ವೇಳೆ ಪಕ್ಕದ ಎಸ್ಟೇಟ್‌ನ ಮ್ಯಾನೇಜರ್ ದೇವಯ್ಯ ನನ್ನೊಂದಿಗೆ ಜಗಳಕ್ಕೆ ನಿಂತರು. ಬಳಿಕ ಆ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ಉತ್ತರ ಭಾರತ ಮೂಲದ ಕಾರ್ಮಿಕರನ್ನು ನನ್ನ ವಿರುದ್ಧ ಛೂ ಬಿಟ್ಟರು. ಅವರೆಲ್ಲ ನನ್ನನ್ನು ಕೊಲೆ ಮಾಡಲೆಂದೇ ದಾಳಿ ನಡೆಸಿದ್ರು ಅಂತ ಆತಂಕಕಾರಿ ವಿಚಾರವನ್ನು ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಹೇಳಿಕೊಂಡಿದ್ದಾರೆ.
ನನ್ನ ವಿರುದ್ಧ ಕಾರ್ಮಿಕರನ್ನು ದಾಳಿಗೆ ಬಿಟ್ಟ ದೇವಯ್ಯ, ಬಳಿಕ ಆತನನ್ನು ಕೊಲೆ ಮಾಡಿ ಬೇಲಿಯನ್ನೆಲ್ಲ ಕಿತ್ತು ಹಾಕಿ ಅಂತ ಹೇಳಿದ್ರು. ಮಿಸೆಲ್ ಅಟ್ಯಾಕ್ ಮಾದರಿಯಲ್ಲಿ ನನ್ನ ಮೇಲೆ ದಾಳಿ ಮಾಡಿದ್ರು. ಆ ಬಳಿಕ ಟ್ರಾಕ್ಟರ್ ಹತ್ತಿಸಿ ನನ್ನ ಕೊಲೆ ಮಾಡಲು ಮುಂದಾದ್ರು. ಅಷ್ಟು ದೊಡ್ಡ ಗುಂಪಿನಿಂದ ನಾನು ಬಚಾವಾಗಿದ್ದೆ ಪವಾಡ. ಇಷ್ಟೆಲ್ಲ ಆದ್ರೂ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ರು ಕೀರ್ತಿರಾಜ್.
ಇನ್ನೂ ಹಲವು ವಿಚಾರಗಳನ್ನು ಅವರು ಪಬ್ಲಿಕ್ ಇಂಪ್ಯಾಕ್ಟ್ ಸಂದರ್ಶನದಲ್ಲಿ ಕೀರ್ತಿರಾಜ್ ಹಂಚಿಕೊಂಡಿದ್ದಾರೆ. ಪಬ್ಲಿಕ್ ಇಂಪ್ಯಾಕ್ಟ್ ಯೂಟ್ಯೂಬ್ ಚಾನಲ್‌ನಲ್ಲಿ ಅದನ್ನು ವೀಕ್ಷಿಸಬಹುದು.