ಮೈಸೂರು : ನಾಡಹಬ್ಬ ಮೈಸೂರು ದಸರಾದಲ್ಲಿ ವಿವಿಧ ರೀತಿಯ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಉದ್ಯಮಿಗಳಿಗೆ ಸರ್ಕಾರ ಕರೆ ನೀಡಿದೆ.
ಮೈಸೂರಿನಲ್ಲಿ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ವ್ಯಾಪಾರ ವಹಿವಾಟು ವಿಸ್ತರಿಸಿಕೊಳ್ಳುವ ಸದವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಪ್ರಾಯೋಜಕತ್ವ ವಿವರ ಇಂತಿದೆ
ಜಂಬೂ ಸವಾರಿ ಪ್ರಾಯೋಜಕತ್ವ 2 ಕೋಟಿ
ಅಂಬಾರಿ ಪ್ರಾಯೋಜಕತ್ವ 1 ಕೋಟಿ
ಪ್ಲಾಟಿನಂ ಪ್ರಾಯೋಜಕತ್ವ 75 ಲಕ್ಷ
ಗೋಲ್ಡನ್ ಪ್ರಾಯೋಜಕತ್ವ 50 ಲಕ್ಷ
ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಮುಂತಾದವರು ಪೊಲೀಸ್ ಕಮಿಷನರ್ ಸೀಮಾಲಾಟ್ಕರ್, ಸಿಇಒ ಗಾಯತ್ರಿ ಮತ್ತಿತರೆ ಅಧಿಕಾರಿಗಳು ಸಭೆಯಲ್ಲಿದ್ದರು.