ಪ್ರಯಾಗ್ರಾಜ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಬೇಕು ಅಂತ ತಂಡ್ ಅಭಿಮಾನಿಗಳು ಮೊದಲ ಸೀಸನ್ನಿಂದಲೂ ಬಯಸ್ತಿದ್ದಾರೆ. ಆದ್ರೆ ಈವರೆಗೂ ಒಮ್ಮೆಯೂ ಆರ್ಸಿಬಿ ಕಪ್ ಗೆದ್ದಿಲ್ಲ. ಆದ್ರೂ ಅಭಿಮಾನಿಗಳ ಸಂಖ್ಯೆ, ಜೋಶ್ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೇ ಅನ್ನೂವ ಉತ್ಸಾಹದಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ವಿವಿಧ ದೇವರಿಗೆ ಹರಕೆಯನ್ನೂ ಹೊತ್ತಿದ್ದಾರೆ.
ಇದೆಲ್ಲ ಹಳೆಯ ವಿಚಾರ… ಈಗಿನ ಫ್ರೆಶ್ ನ್ಯೂಸ್ ಏನ್ ಗೊತ್ತಾ… ಆರ್ಸಿಬಿ ತಂಡದ ಖಟ್ಟರ್ ಅಭಿಮಾನಿಯೊಬ್ಬರು ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಆರ್ಸಿಬಿ ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ಸಲ ನಮ್ ತಂಡ ಗೆಲ್ಲಲೇಬೇಕು ಅಂತ 144 ವರ್ಷಗಳಿಗೊಮ್ಮೆ ನಡೆಯುವ ಮಾಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಜೆರ್ಸಿಯನ್ನು ಮುಳುಗೇಳಿಸಿದ್ದಾರೆ. ಇದೀಗ ಎಲ್ಲೆಡೆ ಸಖತ್ ಸುದ್ದಿಯಾಗುತ್ತಿದೆ.
ಜನರು ತಮ್ಮ ಪಾಪ ಕಳೆಯೋದಕ್ಕಾಗಿ ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಅದೇ ರೀತಿ ಆರ್ಸಿಬಿ ಜೆರ್ಸಿಯನ್ನು ಸಂಗಮದಲ್ಲಿ ಮುಳುಗಿಸಿ ಆರ್ಸಿಬಿಯ ಪಾಪ ಕಳೆಯೋದಕ್ಕಾಗಿ ಪ್ರಾರ್ಥಿಸಿದ್ದಾರಾ ಗೊತ್ತಿಲ್ಲ. ಆದ್ರೆ ತಂಡ ಕಪ್ ಗೆಲ್ಲಬೇಕೆಂಬ ಆಸೆ ಈ ಮಹಾಕುಂಭ ಸ್ನಾನದ ಮೂಲಕವಾದ್ರೂ ಈಡೇರುತ್ತಾ..? ಕೆಲವೇ ತಿಂಗಳಲ್ಲಿ ಗೊತ್ತಾಗಲಿದೆ.
