Monday, March 30, 2026
Homebig breakingಕೋಟೆಕಾರ್‌ ಬ್ಯಾಂಕ್‌ ದರೋಡೆ - ಕೋಟಿ ಮೌಲ್ಯದ ಹಣ, ಚಿನ್ನಾಭರಣ ಹೊತ್ತು ೭೦೦ ಕಿ.ಮೀ ಸಾಗಿದ್ದ...

ಕೋಟೆಕಾರ್‌ ಬ್ಯಾಂಕ್‌ ದರೋಡೆ – ಕೋಟಿ ಮೌಲ್ಯದ ಹಣ, ಚಿನ್ನಾಭರಣ ಹೊತ್ತು ೭೦೦ ಕಿ.ಮೀ ಸಾಗಿದ್ದ ದರೋಡೆಕೋರರು..!

ಮಂಗಳೂರು : ಉಳ್ಳಾಲದ ಕೋಟೆಕಾರ್‌ ಸಹಕಾರ ಬ್ಯಾಂಕ್‌ನಲ್ಲಿ ನಡೆದ ದರೋಡೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಮುರುಗನ್, ಪ್ರಕಾಶ್ ಅಲಿಯಾಸ್ ಜೈಸ್ವಾ ಹಾಗೂ ಮಣಿವಣ್ಣನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ಇನ್ನಷ್ಟೇ ತಿಳಿಯಬೇಕಿದೆ. ದರೋಡೆ ಬಳಿಕ ಆರೋಪಿಗಳು ಮೊದಲಿಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ನಂತರ ತಮಿಳುನಾಡಿಗೆ ತೆರಳಿದ್ದರು. ವಿವಿಧ ತಂಡಗಳಾಗಿ ಬಲೆ ಬೀಸಿದ್ದ ಪೊಲೀಸರು, ತಮಿಳುನಾಡಿನಲ್ಲಿ ಮೂವರು ದರೋಡೆಕೋರರನ್ನು ವಶಕ್ಕೆ ಪಡೆದಿದ್ದಾರೆ. ಇವರ ಈ ಪ್ರಯಾಣದ ಹಾದಿ ಬರೋಬ್ಬರಿ ೭೦೦ ಕಿಲೋ ಮೀಟರ್‌ ಅನ್ನೋದು ತಿಳಿದುಬಂದಿದೆ.
ಮೊದಲಿಗೆ ಪ್ರಕರಣದ ಕಿಂಗ್‌ಪಿನ್‌ ಮುರುಗುಂಡಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಇದರ ಹಿಂದಿನ ಜಾಲ ಮತ್ತು ಆಳದ ಮಾಹಿತಿ ಸಿಕ್ಕಿದೆ. ಆ ಪ್ರಕಾರ ಬಿರುಸಿನ ತನಿಖೆ ಕೈಗೊಂಡು ಮೂವರನ್ನು ಖೆಡ್ಡಾಗೆ ಬೀಳಿಸಿದ್ದಾರೆ. ಬಂಧಿತ ಆರೋಪಿಗಳು ಮುಂಬೈನ ಕುಖ್ಯಾತ ಧಾರಾವಿ ಗ್ಯಾಂಗ್‌ನ ಸದಸ್ಯರು ಅನ್ನೋದು ತಿಳಿದುಬಂದಿದೆ.
ತಾವು ಬಳಸುತ್ತಿದ್ದ ಕಾರಿಗೆ ಬೇರೆ ಬೇರೆ ನಂಬರ್‌ ಪ್ಲೇಟ್‌ಗಳನ್ನ ಬಳಸುತ್ತಿದ್ದರು ಅನ್ನೋದು ತಿಳಿದುಬಂದಿದೆ. ಒಂದೊಂದು ಕಡೆ ಒಂದೊಂದು ನಂಬರ್‌ ಪ್ಲೇಟ್‌ ಬಳಸಿ ಎಲ್ಲೂ ಸಿಕ್ಕಿಹಾಕಿಕೊಳ್ಳದ ಹಾಗೆ ಚಾಣಾಕ್ಷತನ ಬಳಸಿದ್ದರು. ಪೊಲೀಸರು ವಶಪಡಿಸಿಕೊಂಡ ಕಾರ್‌ನಲ್ಲಿ ಹಲವು ನಂಬರ್‌ ಪ್ಲೇಟ್‌ ಹಾಗೂ ಅದನ್ನ ಅಳವಡಿಸಲು ಬೇಕಾದ ಟೂಲ್‌ಗಳು ಕೂಡಾ ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಇನ್ಯಾರ್ಯಾರು ಭಾಗಿಯಾಗಿದ್ದಾರೆ? ಇದಕ್ಕೆ ಸಾಥ್‌ ಕೊಟ್ಟ ಸ್ಥಳೀಯರು ಯಾರು? ಎಂಬಿತ್ಯಾದಿ ವಿಚಾರಗಳನ್ನು ಪೊಲೀಸರು ತನಿಖೆ ಮೂಲಕ ಬಹಿರಂಗಪಡಿಸಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!