ಚಾಮರಾಜನಗರ : ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕಿಟಕಿಯಿಂದ ತಲೆ ಹೊರಗೆ ಹಾಕಿದ ವೇಳೆ ಎದುರಿನಿಂದ ಲಾರಿಯೊಂದ ಬಂದ ಪರಿಣಾಮ ಮಹಿಳೆಯ ತಲೆ ಛಿದ್ರವಾಗಿರುವ ಭೀಕರ ಘಟನೆ ನಂಜನಗೂಡು ಸಮೀಪ ಮುದ್ದಹಳ್ಳಿ ಗೇಟ್ ಬಳಿ ಸಂಭವಿಸಿದೆ.
ಮೃತ ಮಹಿಳೆಯನ್ನು ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ ಶಿವಲಿಂಗಮ್ಮ(56) ಎಂದು ಗುರುತಿಸಲಾಗಿದೆ. ಕೆಎಸ್ಆರ್ಟಿಸಿ ಗುಂಡ್ಲುಪೇಟೆಯಿಂದ ನಂಜನಗೂಡು ಕಡೆಗೆ ಬರುತ್ತಿತ್ತು. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಉಗಿಯುವುದಕ್ಕೋ ಅಥವಾ ಯಾವುದೋ ಅಗತ್ಯಕ್ಕಾಗಿ ತಲೆ ಹೊರಗೆ ಹಾಕಿದ್ದಾರೆ. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ಮಹಿಳೆಯ ರುಂಡವನ್ನು ಬೇರ್ಪಡಿಸಿದೆ. ಘಟನೆ ಕಂಡು ಬಸ್ನಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಕಾರಣವಾದ ಲಾರಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಬಸ್ನಲ್ಲಿ ಪ್ರಯಾಣಿಸುವ ಸಂದರ್ಭ ತಲೆ, ಕೈ ಹೊರಗೆ ಹಾಕಬೇಡಿ ಅಂತ ಚಾಲಕರು, ನಿರ್ವಾಹಕರು ಹೇಳುತ್ತಲೇ ಇರುತ್ತಾರೆ. ಅಷ್ಟಾಗಿಯೂ ಕೆಲವರು ಏನೂ ಆಗಲ್ಲ ಅನ್ನುವಂತೆ ನಿಯಮ ಮೀರುತ್ತಿರುತ್ತಾರೆ. ಹೀಗಾಗಿ ಇಂಥ ಘಟನೆಗಳು ಸಂಭವಿಸುತ್ತಿರುತ್ತದೆ. ಬಸ್ ಅಥವಾ ಯಾವುದೇ ವಾಹನವಿರಲಿ, ಪ್ರಯಾಣಿಸುವ ಸಂದರ್ಭ ಏನೇ ಅಗತ್ಯವಿದ್ದರೂ ಕಿಟಕಿಯ ಹೊರಗೆ ತಲೆ ಅಥವಾ ಇನ್ಯಾವುದೇ ಭಾಗಗಳನ್ನು ಹಾಕಬೇಡಿ.
ಚಲಿಸುತ್ತಿದ್ದ ಬಸ್ನ ಕಿಟಕಿಯಿಂದ ತಲೆ ಹೊರ ಹಾಕಿದ ಮಹಿಳೆಯ ರುಂಡವೇ ಛಿದ್ರವಾಯ್ತು..!
RELATED ARTICLES