Tuesday, March 31, 2026
Homebig breakingಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಭರ್ಜರಿ ಕಾರ್ಯಾಚರಣೆ - ಕಡವೆ ಶಿಖಾರಿ ಮಾಡಿದ್ದ ವ್ಯಕ್ತಿ ಅಂದರ್..!

ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಭರ್ಜರಿ ಕಾರ್ಯಾಚರಣೆ – ಕಡವೆ ಶಿಖಾರಿ ಮಾಡಿದ್ದ ವ್ಯಕ್ತಿ ಅಂದರ್..!

ಚಿಕ್ಕಮಗಳೂರು : ಕಡವೆ ಬೇಟೆಯಾಡಿ ಮಾಂಸ ಮಾಡುತ್ತಿದ್ದ ವ್ಯಕ್ತಿಯನ್ನು ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್‌ನ ತೋಗರಿಹಂಕಲ್ ಗ್ರಾಮದ ಕೂತನ್ಕುಲ್ ಎಸ್ಟೇಟ್‌ನಲ್ಲಿ ವ್ಯಕ್ತಿಯೊಬ್ಬರು ಬೇಟೆಯಾಡಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಆ ಪ್ರಕಾರ ಕಾರ್ಯಾಚರಣೆ ನಡೆಸಿದ ವೇಳೆ ತೋಟದ ರೈಟರ್ ದೇವಯ್ಯ ಎಂಬಾತ ಕಡವೆ ಬೇಟೆಯಾಡಿ, ಮಾಂಸ ಮಾಡುತ್ತಿದ್ದುರು ಕಂದುಬಂದಿದೆ. ದೇವಯ್ಯನನ್ನು ವಶಕ್ಕೆ ಪಡೆದು, ಅಂದಾಜು 40 kg ಮಾಂಸ ಮತ್ತು ಚರ್ಮ, ಕೃತ್ಯಕ್ಕೆ ಬಳಸಿದ್ದ ಚೂರಿ, 2 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಕಾಯ್ದೆ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ.
ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರಹಾರ್ಶ್, ಪೂರಪ್ಪ ಮತ್ತು ಇತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!