Monday, March 30, 2026
Homebig breakingಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಬಿರುಸಿನ ಕಾರ್ಯಾಚರಣೆ - ಎನ್‌ಕೌಂಟರ್‌ನಲ್ಲಿ 12ಕ್ಕೂ ಹೆಚ್ಚು ನಕ್ಸಲರು ಬಲಿ..!

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳ ಬಿರುಸಿನ ಕಾರ್ಯಾಚರಣೆ – ಎನ್‌ಕೌಂಟರ್‌ನಲ್ಲಿ 12ಕ್ಕೂ ಹೆಚ್ಚು ನಕ್ಸಲರು ಬಲಿ..!

ಛತ್ತೀಸ್‌ಗಢ : ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್‌ನಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಕ್ಸಲರಿಗಾಗಿ ವಿಶೇಷ ಕಾರ್ಯಾಚರಣೆ ಗುಂಪು ಕೂಂಬಿಂಗ್‌ ನಡೆಸುತ್ತಿತ್ತು.
ಕುಳರಿಘಾಟ್ ಮೀಸಲು ಅರಣ್ಯದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ಜನವರಿ 19ರ ರಾತ್ರಿ ಕಾರ್ಯಾಚರಣೆ ಆರಂಭವಾಗಿತ್ತು. ಒಡಿಶಾದಲ್ಲಿ ನಕ್ಸಲರ ಮುಖ್ಯಸ್ಥನಾಗಿದ್ದ, ಜೈರಾಮ್ ಅಲಿಯಾಸ್ ಚಲಪತಿ ಕೂಡ ಹತ್ಯೆಯಾಗಿದ್ದಾನೆ ಎನ್ನಲಾಗಿದೆ. ಸರ್ಕಾರಕ್ಕೆ ಸವಾಲಾಗಿ ಕಾಡಿದ್ದ ಈತನ ಪತ್ತೆಗೆ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಈ ಎನ್‌ಕೌಂಟರ್‌ನಲ್ಲಿ ಕುಖ್ಯಾತ ನಕ್ಸಲರಾದ ಮನೋಜ್ ಮತ್ತು ಗುಡ್ಡು ಕೂಡ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜಿಲ್ಲಾ ಮೀಸಲು ಗಾರ್ಡ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪಿನ ಒಟ್ಟು ೧೦ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ರೈಫಲ್ ಸೇರಿದಂತೆ ಭಾರೀ ಪ್ರಮಾಣದ ಬಂದೂಕು, ಮದ್ದುಗುಂಡುಗಳು ಮತ್ತು ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾವೋವಾದಿಗಳ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!