ಶಿವಮೊಗ್ಗ : ತನ್ನ ಪತ್ನಿಗೆ ಮೆಸೇಜ್, ಫೋನ್ ಮಾಡ್ತಾನೆ ಅನ್ನುವ ಕಾರಣಕ್ಕೆ ಯುವಕನೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ಡ್ರೈವರ್ ವೃತ್ತಿ ಮಾಡಿಕೊಂಡಿದ್ದ ರವಿ(34) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಈತನ ಆಪ್ತ ಸ್ನೇಹಿತ ಅರುಣ್ ಎಂಬಾತನೇ ಚಾಕು ಇರಿದವನು. ರವಿಯ ಹೆಂಡತಿಗೆ ಅರುಣ್ ನಿರಂತರವಾಗಿ ಫೋನ್, ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕೆ ಸಿಟ್ಟಾಗಿದ್ದ ಅರುಣ ನಿನ್ನೊಂದಿಗೆ ಮಾತಾಡಬೇಕು ಅಂತ ರವಿಯನ್ನು ಕರೆದು ಚಾಕು ಇರಿದಿದ್ದಾನೆ.
ಹೊಸಮನೆ ಬಡಾವಣೆಯಲ್ಲಿ ಏರ್ಪಾಡಾಗಿದ್ದ ತಿಥಿ ಕರ್ಮಾಂತರದಲ್ಲಿ ಅಡುಗೆ ಕೆಲಸಕ್ಕೆ ಬಂದಿದ್ದ ಅರುಣ್, ಇಲ್ಲಿಗೆ ಬರುವಂತೆ ರವಿಯನ್ನು ಕರೆದಿದ್ದಾನೆ. ಬೈಕ್‌ನಲ್ಲಿ ಬಂದ ರವಿ ಮತ್ತು ಅರುಣ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಡುಗೆ ಕೋಣೆಯಿಂದ ಬರುವಾದ ಅರುಣ್ ಖಾರದಪುಡಿ, ಚಾಕು, ತೆಗೆದುಕೊಂಡು ಬಂದಿದ್ದ. ವಾಗ್ವಾದ ಅತಿರೇಕಕ್ಕೆ ತೆರಳಿ ರವಿ ಖಾರದಪುಡಿ ಎರಚಿ ಚಾಕುವಿನಿಂದ ಇರಿದಿದ್ದಾನೆ.
ಅಲ್ಲಿಗೆ ಬಂದ ರವಿಯ ಸ್ನೇಹಿತರು ರವಿಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಚಿತ್ರಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಅರುಣ ತಲೆಮರೆಸಿಕೊಂಡಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#shivamoga #wife #crime #friends #shivamogga
