ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕೊನೆಯ ಘಟಕ್ಕೆ ಬಂದು ತಲುಪಿದೆ. ಇದೇ ವಾರ ಬಿಗ್ಬಾಸ್ ವಿಜೇತರು ಯಾರು ಅನ್ನವ ಕುತೂಹಲಕ್ಕೆ ತೆರೆಬೀಳಲಿದೆ.
ಜನವರಿ 25 ಶನಿವಾರ, 26 ಭಾನುವಾರದಂದು ಗ್ರ್ಯಾಂಡ್ ಫಿನಾಲೆ ಇವೆಂಟ್ ನಡೆಯಲಿದೆ. ಈ ಕಾರ್ಯಕ್ರಮ ಆ ದಿನಗಳಲ್ಲಿ ಸಂಜೆ 6 ಗಂಟೆಯಿಂದ ಪ್ರಸಾರವಾಗಲಿದೆ. ಪ್ರತಿ ದಿನದ ಸಂಚಿಕೆ ಪ್ರತಿದಿನ ರಾತ್ರಿ 9.30ಕ್ಕೆ, ವಾರಾಂತ್ಯದ ಎಪಿಸೋಡ್ 9 ಗಂಟೆಗೆ ಪ್ರಸಾರ ಆಗುತ್ತಿತ್ತು. ಗ್ರ್ಯಾಂಡ್ ಫಿನಾಲೆ ಕುರಿತಾದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದ್ದು, ಅದರಲ್ಲಿ ಫೈನಲ್ ಎಪಿಸೋಡ್ನ ಪ್ರಸಾರದ ಸಮಯದ ಕುರಿತಾದ ಮಾಹಿತಿ ನೀಡಲಾಗಿದೆ.
ಕಿಚ್ಚ ಸುದೀಪ್ ಕೊನೆಯ ಶೋ : ವಾರಾಂತ್ಯದಲ್ಲಿ ಪ್ರಸಾರವಾಗುವ ಬಿಗ್ಬಾಸ್ ಫಿನಾಲೆ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಪ್ರಸಾರವಾಗುವ ಕೊನೆಯ ಬಿಗ್ಬಾಸ್ ಕಾರ್ಯಕ್ರಮ. ಮುಂದಿನ ಸೀಸನ್ನಲ್ಲಿ ನಾನು ನಿರೂಪಣೆ ಮಾಡುವುದಿಲ್ಲ ಅಂತ ಸುದೀಪ್ ಈಗಾಗಲೇ ಹೇಳಿದ್ದಾರೆ. ಹೀಗಾಗಿ ಕಿಚ್ಚನ ನಿರೂಪಣೆಯ ಕೊನೆಯ ಎಪಿಸೋಡ್ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಿಸಬಹುದು.
