ತಿರುವನಂತಪುರಂ : ಕೆಲವು ವರ್ಷದ ಹಿಂದೆ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಸಿದ್ದ ಕೇರಳದ ಶರೋನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಯ್ಯಟ್ಟಿಂಕರ ಕೋರ್ಟ್ ಆತನ ಪ್ರೇಯಸಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
೨೪ ವರ್ಷದ ಗ್ರೀಷ್ಮಾ ನ್ಯಾಯಾಲಯದಿಂದ ಕಠಿಣ ಶಿಕ್ಷೆಗೆ ಗುರಿಯಾದವಳು. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗ್ರೀಷ್ಮಾ ಸಹೋದರ ಮಾವನಿಗೂ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ. ಎರಡನೇ ಆರೋಪಿಯಾಗಿದ್ದ ಗ್ರೀಷ್ಮಾ ತಾಯಿಯ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ಸಿಗದ ಹಿನ್ನೆಲೆಯಲ್ಲಿ ಖುಲಾಸೆ ಮಾಡಲಾಗಿದೆ.
ಏನಿದು ಘಟನೆ : ಆರೋಪಿ ಗ್ರೀಷ್ಮಾ ಮತ್ತು ಮೃತ ಶರೋನ್ ರಾಜ್ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಆಕೆಗೆ ಬೇರೊಬ್ಬನೊಂದಿಗೆ ಮದುವೆಗೆ ಕುಟುಂಬಸ್ಥರು ಮುಂದಾಗಿದ್ದರು. ಹೀಗಾಗಿ ಆಕೆ ತನ್ನ ಪ್ರಿಯತಮನೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಳು. ಇದಕ್ಕೆ ಶರೋನ್ ಒಪ್ಪಿರಲಿಲ್ಲ. ಹೀಗಾಗಿ ಅತನನ್ನು ಕೊಲೆ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರ್ತಾಳೆ. ಅದರಂತೆ ತನ್ನ ಆಪ್ತರೊಂದಿಗೆ ಸೇರಿ ಆಯುರ್ವೇದ ಔಷಧದಲ್ಲಿ ವಿಷ ಬೇರೆಸಿ ಆತನಿಗೆ ನೀಡುತ್ತಾಳೆ. ಗಂಭೀರ ಸ್ವರೂಪದಲ್ಲಿ ಅಸ್ವಸ್ಥನಾದ ಆತನ ಕೆಲವು ದಿನದ ಬಳಿಕ ಕೊನೆಯುಸಿರೆಳೆದಿದ್ದ.
ಭಾವಿಸಿದ್ದಳು. 1 ಹನಿ ನೀರು ಕೂಡ ಕುಡಿಯಲಾಗದೆ ಶರೋನ್ 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡಿದ್ದರು. ಆದರೆ, ಬಹುಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದರು.
ಈ ಸಂಬಂಧಿತವಾಗಿ ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಯಾವುದೇ ಸೂಕ್ತ ಸಾಕ್ಷ್ಯಗಳಿಲ್ಲದಿದ್ದರೂ ಅತ್ಯುತ್ತಮ ರೀತಿಯಲ್ಲಿ ತನಿಖೆ ನಡೆಸಿದ ಪೊಲೀಸರ ಕಾರ್ಯವೈಖರಿಗೆ ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ನಡುವೆ ಗ್ರೀಷ್ಮಾ ತನ್ನ ಶಿಕ್ಷೆಯಲ್ಲಿ ಸಡಿಲಿಕೆ ಮಾಡುವಂತೆ ಕೋರ್ಟ್ಗೆ ಮನವಿ ಮಾಡಿದ್ದಳು. ನಾನು ಹಿಂದೆ ಯಾವುದೇ ಅಪರಾಧ ಮಾಡಿಲ್ಲ. ಪೋಷಕರಿಗೆ ನಾನೊಬ್ಬಳೇ ಮಗಳು. ಹೀಗಾಗಿ ಸಡಿಲಿಕೆ ಮಾಡುವಂತೆ ಕೋರಿದ್ದಳು. ಆದರೆ ನ್ಯಾಯಾಲಯ ಇದನ್ನು ಪರಿಗಣಿಸಿಲ್ಲ. ಅಪರಾಧವೆಸಗೋದಕ್ಕಾಗಿ ಆಕೆ ಹಂತಹಂತವಾಘಗಿ ಸಂಚು ರೂಪಿಸಿದ್ದಾಳೆ. ಈ ಮೊದಲು ಕೂಡ ಯುವಕನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು. ತನಿಖೆಯನ್ನು ಬೇರೆಡೆಗೆ ತಿರುಗಿಸಲು ಬಂಧನದ ನಂತರ ಆತ್ಮಹತ್ಯೆಯ ನಾಟಕವಾಡಿದ್ದಳು ಅಂತ ಎಂದು ನ್ಯಾಯಾಲಯ ಹೇಳಿದೆ.
