Monday, August 4, 2025
!-- afp header code starts here -->
Homebig breakingಶ್ರೀರಾಮುಲು ಸಂಭಾವಿತ ರಾಜಕಾರಣಿ - ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ ಎಂದ ಸಚಿವ ಕೆ.ಎನ್.‌ ರಾಜಣ್ಣ

ಶ್ರೀರಾಮುಲು ಸಂಭಾವಿತ ರಾಜಕಾರಣಿ – ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ ಎಂದ ಸಚಿವ ಕೆ.ಎನ್.‌ ರಾಜಣ್ಣ

ಹಾಸನ : ಸರಕಾರದ ಜಾಗ ಕಬಳಿಸೋದು ಪಾಪದ ಕೆಲಸ. ಅಂಥವರ ಬಗ್ಗೆ ತನಿಖೆ ನಡೆಯುತ್ತಿದ್ದು, ಕಠಿಣ ಶಿಕ್ಷೆ ಆಗುತ್ತದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಯಾರೂ ಮಾತ್ನಾಡಬಾರದು ಅಂತ ಹೈಕಮಾಂಡ್ ಹೇಳಿದ್ದಾರೆ. ಅಧ್ಯಕ್ಷ ಸ್ಥಾನ ಆಕಾಂಕ್ಷಿತ ವ್ಯಕ್ತಿ ಅಂತ ನಾನು ಹೇಳಿದ್ದೀನಿ, ಅದು ನನ್ನ ಅಭಿಪ್ರಾಯ. ಅಧ್ಯಕ್ಷ ಸ್ಥಾನ ನೀಡಿದ್ರೆ ಮಂತ್ರಿ ಸ್ಥಾನ ತ್ಯಜಿಸಿ ಆ ಸ್ಥಾನ ನಿಭಾಯಿಸುತ್ತೇನೆ. ಹಾಗಂದ ಮಾತ್ರಕ್ಕೆ ನಾನು ಅರ್ಜಿ ಹಾಕಿ ಕೇಳೋಕೆ ಹೋಗಿಲ್ಲ ಎಂದರು.
ಶ್ರೀರಾಮುಲು ನಮ್ಮ ಪಕ್ಷಕ್ಕೆ ಬರ್ತಿನಿ ಅಂದ್ರೆ ನಮ್ಮ ವಿರೋಧ ಇಲ್ಲ. ಸತೀಶ್ ಜಾರಕಿಹೊಳಿ ಕೂಡ ಹೇಳಿದ್ದಾರೆ. ಶ್ರೀರಾಮುಲು ಸಂಭಾವಿತ ರಾಜಕಾರಣಿ ಇದ್ದಾರೆ. ಶಾಸಕರನ್ನ ಸ್ವಂತ ಬಲದ ಮೇಲೆ ಕಟ್ಟೋ ನಾಯಕ. ಅವರು ಬಂದ್ರೆ ಪಕ್ಷದ ಬಲ ಹೆಚ್ಚುತ್ತದೆ. ಸತೀಶ್ ಜಾರಕಿ ಹೊಳಿಗೆ ಟಾಂಗ್ ಕೊಡೊಕೆ ಮಾಡ್ತಿದ್ದಾರೆ ಅನ್ನೊದು ಸುಳ್ಳು. ಇದು ಮಾಧ್ಯಮ ಸೃಷ್ಟಿ. ನಾನು, ಸತೀಶ್, ರಾಮುಲು ಎಲ್ಲಾ ಚನ್ನಾಗೆ ಇದ್ದೇವೆ ಎಂದರು.
ಹಾಸನ ಜಿಲ್ಲೆಯ ಇಬ್ಬರಿಗೆ ಪದ್ಮಭೂಷಣ ಪದ್ಮವಿಭೂಷಣ ಬಂದಿದೆ. ಅವರಿಗೂ ಅಭಿನಂದನೆ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಕಾಂಗ್ರೆಸ್ ಮುಖಂಡ ಜಾವಗಲ್ ಮಂಜುನಾಥ್ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!