Advertisement

Homeಸಿನೆಮಾಅಭಿನಯ ಸರಸ್ವತಿ ಸರೋಜಾದೇವಿ ವಿಧಿವಶ: ಸಾಯುವುದಕ್ಕೂ ಮೊದಲು ಕೊನೆ ಕ್ಷಣ ಹೇಗಿತ್ತು ಗೊತ್ತಾ?

ಅಭಿನಯ ಸರಸ್ವತಿ ಸರೋಜಾದೇವಿ ವಿಧಿವಶ: ಸಾಯುವುದಕ್ಕೂ ಮೊದಲು ಕೊನೆ ಕ್ಷಣ ಹೇಗಿತ್ತು ಗೊತ್ತಾ?

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ  ಬಿ.ಸರೋಜಾದೇವಿ(87) ನಿಧನರಾಗಿದ್ದಾರೆ.ಜನವರಿ 7, 1938 ರಲ್ಲಿ ಜನಿಸಿದ್ದ ಸರೋಜಾದೇವಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ   ಮಲ್ಲೇಶ್ವರಂನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ನಿಧರಾದರು

ಸರೋಜಾ ದೇವಿ ಅವರು ಇಂದು ಎಂದಿನಂತೆ ಬೆಂಗಳೂರಿನ ಮನೆಯಲ್ಲೇ ಇದ್ದರು. ಆದರೆ, ಬೆಳಿಗ್ಗೆ ಅವರಿಗೆ ಏಕಾಏಕಿ ತಲೆಸುತ್ತು ಬಂದು ಬಿದ್ದುಹೋಗಿದ್ದಾರೆ. ಇದನ್ನು ನೋಡಿ ಮನೆಯವರಿಗೆ ಆತಂಕ ಆಯಿತು. ಅವರನ್ನು ಹತ್ತಿರದ ಮಣಿಪಾಲ ಹಾಸ್ಪಿಟಲ್​ಗೆ ಕರೆದುಕೊಂಡು ಹೋಗಲಾಯಿತು.

ಆದರೆ, ಸರೋಜಾ ದೇವಿ ಆಗಲೇ ನಿಧನ ಹೊಂದಿದ್ದರು. ಅವರು ಮೃತಪಡುವಾಗ ಸಮಯ ಬೆಳಿಗ್ಗೆ 8.30 ಆಗಿತ್ತು. 9.30ಕ್ಕೆ ಮನೆಗೆ ಪಾರ್ಥಿವ ಶರೀರ ರವಾನೆ ಮಾಡಲಾಯಿತು. ನಾಳೆ (ಜುಲೈ 15) ಅಂತ್ಯ ಸಂಸ್ಕಾರ ಎಲ್ಲಿ ಎಂಬುದನ್ನು ನಿರ್ಧರಿಸಲಾಗುತ್ತದೆ.

ಮೃತದೇಹ ಮಲ್ಲೇಶ್ವರಂ ನಿವಾಸದಲ್ಲಿದ್ದು ಪೊಲೀಸರು ಭದ್ರತೆ ವ್ಯವಸ್ಥೆ ಮಾಡುತ್ತಿದ್ದಾರೆ. ಹಲವು ಗಣ್ಯರು ಈಗ ನಿವಾಸಕ್ಕೆ ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ನೀಡಿ ಪುರಸ್ಕರಿಸಿತ್ತು.

ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಸರೋಜಾದೇವಿ ಅವರು ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್‌ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ, ಭೂಕೈಲಾಸ, ಅಣ್ಣತಂಗಿ, ಜಗಜ್ಯೋತಿ ಬಸವೇಶ್ವರ, ದೇವಸುಂದರಿ, ವಿಜಯನಗರದ ವೀರಪುತ್ರ, ಮಲ್ಲಮ್ಮನ ಪವಾಡ, ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ, ಪೂರ್ಣಿಮಾ, ಗೃಹಿಣಿ, ಪಾಪಪುಣ್ಯ, ಸಹಧರ್ಮಿಣಿ, ಶ್ರೀನಿವಾಸಕಲ್ಯಾಣ, ಚಾಮುಂಡೇಶ್ವರಿ ಮಹಿಮೆ, ಚಿರಂಜೀವಿ, ಶನಿಪ್ರಭಾವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಸರೋಜಾದೇವಿ ಅವರು ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಮತ್ತು ಎಂ.ಜಿ. ರಾಮಚಂದ್ರನ್ ಅವರೊಂದಿಗೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಮತ್ತು ಸುನೀಲ್ ದತ್ ಅವರೊಂದಿಗೆ ನಟಿಸಿದ್ದಾರೆ.

ನಾನು ಸತ್ಯನಾರಾಯಣ ದೇವರ ಪ್ರಸಾದದಿಂದ ಜನಿಸಿದ್ದೆ. ಈ ಕಾರಣಕ್ಕೆ ನನ್ನ ತಾಯಿಗೆ ನಾನು ಅಂದರೆ ಬಹಳ ಪ್ರೀತಿ ಎಂದು ಬಿ ಸರೋಜಾದೇವಿ(87) ಹೇಳಿದ್ದರು

ಹೌದು. ಬಹುಭಾಷಾ ನಟಿಯಾಗಿರುವ ಸರೋಜಾದೇವಿ ಅವರು ಇಂದು ವಿಧಿವಶರಾಗಿದ್ದಾರೆ. 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಇವರು ಕನ್ನಡ ಚಿತ್ರರಂಗದಲ್ಲಿ ʼಅಭಿನಯ ಸರಸ್ವತಿʼ ಎಂದೇ ಹೆಸರು ಪಡೆದಿದ್ದರು.

ಸರೋಜಾದೇವಿ ಅವರ ಬಗ್ಗೆ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ ಸಾಕ್ಷ್ಯಚಿತ್ರವನ್ನು ತಯಾರಿಸಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಅವರು ತಮ್ಮ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. 

ನನ್ನ ತಾಯಿ ರುದ್ರಮ್ಮ ನಾಲ್ಕನೇಯ ಬಾರಿ ಗರ್ಭವತಿಯಾಗಿದ್ದರು. ಡೆಲಿವರಿ ಸಮಯ ಹತ್ತಿರ ಬಂದಾಗ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನಮ್ಮ ಮನೆಯ ಹತ್ತಿರದಲ್ಲಿ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು.

ನನ್ನ ತಾಯಿ ಹೊಟ್ಟೆನೋವಿನಿಂದ ಬಳಲುವುದನ್ನು ನೋಡಿ ನೆರೆ ಮನೆಯವರು ದೊನ್ನೆಯಲ್ಲಿ ಸತ್ಯನಾರಾಯಣ ದೇವರ ಸಜ್ಜಿಗೆ ಪ್ರಸಾದವನ್ನು ನೀಡಿದರು. ಸಜ್ಜಿಗೆ ಪ್ರಸಾದವನ್ನು ತಾಯಿ ಸೇವಿಸಿದ ಕೆಲ ಸಮಯದಲ್ಲಿ ಹೆಣ್ಣು ಮಗುವಿಗೆ ಜನನ ನೀಡಿದರು.

ಮೊದಲ ಮೂರು ಹೆಣ್ಣು ಮಕ್ಕಳೇ  ಆಗಿದ್ದರಿಂದ ಸಂಬಂಧಿಕರು ನಾಲ್ಕನೇಯ ಹೆಣ್ಣು ಮಗುವನ್ನು ಯಾರಿಗಾದರೂ ಕೊಡು ಎಂದು ತಾಯಿಗೆ ಹೇಳಿದ್ದರು. ಆದರೆ ತಾಯಿ ನನ್ನನ್ನು ಯಾರಿಗೆ ಕೊಡಲಿಲ್ಲ. ನನ್ನ ಬಹಳ ಪ್ರೀತಿಯಿಂದ ಸಾಕಿದ್ದರು. ಅಂದು ನನಗೆ ಬಹಳ ಪ್ರೋತ್ಸಾಹ ನೀಡಿದ್ದರಿಂದ ನಾನು ಕಲಾವಿದೆಯಾದೆ ಎಂದು ಹೇಳಿದ್ದರು.

ಬಹಳ ದೈವ ಭಕ್ತೆಯಾಗಿದ್ದ ಸರೋಜಾದೇವಿ ಅವರು ಪ್ರತಿನಿತ್ಯ ಬೆಳಗ್ಗೆ ಎದ್ದು ಪೇಪರ್‌ ಓದುತ್ತಿದ್ದರು. ನಂತರ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿನ್ನುತ್ತಿದ್ದರು. ಇಂದು ಸ್ನಾನ ಮಾಡಿ ಪೂಜೆ ಮಾಡಿದ ಬಳಿಕ ಬೆಳಗ್ಗೆ 9 ಗಂಟೆಯ ವೇಳೆಗೆ ಟಿವಿ ಆನ್‌ ಮಾಡಿದ್ದರು. ಈ ವೇಳೆ ಅವರು ತುಂಬಾ ಸುಸ್ತಾಗಿದ್ದರು. ಅರೆಪ್ರಜ್ಞಾವಸ್ಥೆ ಸ್ಥಿತಿಗೆ ಹೋದ ಕೂಡಲೇ ಅವರನ್ನು ಮಲ್ಲೇಶ್ವರದಲ್ಲಿರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಅವರು ಮೃತಪಟ್ಟಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!