ಚಿಕ್ಕಮಗಳೂರು: ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ನಟಿ ಮಾನ್ವಿತಾ ಮದುವೆ ನೆರವೇರಿದೆ.
ಮೈಸೂರು ಮೂಲದ ಅರುಣ್ ಕುಮಾರ್ ನನ್ನ ಮಾನ್ವಿತಾ ವರಿಸಿದ್ದು, ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಸಂಪ್ರದಾಯದಂತೆ ಈ ಜೋಡಿಯ ಶುಭ ವಿವಾಹ ನಡೆದಿದೆ.

ಸಿನಿಮಾ ರಂಗದ ಗಣ್ಯರು ಸೇರಿದಂತೆ ಹಲವರು ಮದುವೆಗೆ ಆಗಮಿಸಿ ನವ ಜೋಡಿಗೆ ಶುಭಹಾರೈಸಿದ್ರು. ಮಾನ್ವಿತಾ ಪತಿ ಅರುಣ್ ಮ್ಯೂಸಿಕ್ ಪ್ರೊಡ್ಯುಸರ್ ಆಗಿದ್ದು, ಇವರಿಬ್ಬರದ್ದೂ ಪಕ್ಕಾ ಅರೇಂಜ್ ಮ್ಯಾರೇಜ್. ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದೇನೆ ಎಂದಿದ್ದಾರೆ ನಟಿ ಮಾನ್ವಿತಾ.