ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಸದ್ಯ ಜೈಲಿನಲ್ಲಿ ಸಮಯ ಕಳೆಯೋದಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆನ್ನು ನೋವಿಜದೆ ಸರ್ಜಿಕಲ್ ಚೆಯರ್ ಬೇಕು ಎಂದು ಮೊನ್ನೆ ದರ್ಶನ್ ಬೇಡಿಕೆ ಇಟ್ಟಿದ್ದರು. ಆ ಬೇಡಿಕೆ ಈಡೇರಿದ ಬೆನ್ನಲ್ಲೇ ಇದೀಗ ಮತ್ತೊಂದು ಬೇಡಿಕೆ ಮುಂದಿಟ್ಟಿದ್ದಾರೆ. ಜೈಲಿನಲ್ಲಿ ತಮ್ಮ ವಿರುದ್ಧ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ತಿಳಿದುಕೊಳ್ಳಲು ಟಿವಿ ಬೇಕೇ ಬೇಕು ಎಂದು ಜೈಲಾಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ದರ್ಶನ್ ಮೀಡಿಯಾದ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಇದೀಗ ದರ್ಶನ್ ಅವರೇ ಟಿವಿ ಮೊರೆ ಹೋಗ ಬೇಕಾಗಿದೆ. ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ಜೈಲು ಸಿಬ್ಬಂದಿ ಬಳಿ ನಟ ದರ್ಶನ ಕೇಳಿದ್ದ ಎನ್ನಲಾಗುತ್ತಿದೆ. ಈ ವೇಳೆ ಸಿಬ್ಬಂದಿ ನಿಮಗೆ ಟಿವಿ ಬೇಕಾಗಿದ್ದರೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂದು ಕೂಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪರಪ್ಪನ ಆಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಜೈಲಿನಲ್ಲಿ ಕೊಲೆ ಆರೋಪಿ ದರ್ಶನ ಇದೀಗ ಮಂಕಾಗಿ ಕಂಡು ಬಂದಿದ್ದಾರೆ. ಜೈಲಿನ ಸಿಬ್ಬಂದಿ ಹೊರಗಿನ ಮಾಹಿತಿಯನ್ನು ನಟ ದರ್ಶನ್ ಕೇಳುತ್ತಿದ್ದಾರೆ. ಊಟ ಕೊಡಲು ಹೋದ ಸಿಬ್ಬಂದಿಯ ಬಳಿ ದರ್ಶನ್ ಹೊರಗಿನ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.ಅಲ್ಲದೆ ಜೈಲಿನ ಬಳಿ ಜೈಲು ಸಿಬ್ಬಂದಿ ಮೂಲಕ ಸಂದೇಶ ಹೇಳಿರುವ ಆರೋಪಿ ದರ್ಶನ್, ಜೈಲಿನ ಬಳಿ ಯಾರು ಅಭಿಮಾನಿಗಳು ಬರುವುದು ಬೇಡ ಎಂದಿದ್ದಾರೆ ಎನ್ನಲಾಗಿದೆ.
