Puneeth Rajkumar: ಅಪ್ಪು, ಈವೊಂದು ಹೆಸರು ಕರುನಾಡಿಗರ ಮನ ಮನೆಯಲ್ಲಿ ಅಜಾರಮರ. ಕರುನಾಡ ರತ್ನ, ಯುವರತ್ನ ಎಂದೇ ಖ್ಯಾತಿ ಪಡೆದಿರುವ ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ರವರ 49ನೇ ವರ್ಷದ ಹುಟ್ಟುಹಬ್ಬ.
ಇಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸ್ಮಾರಕ ಬಳಿ ಕೋಟ್ಯಾಂತರ ಅಭಿಮಾನಿಗಳು ಮುಂಜಾನೆಯಿಂದಲೇ ಸ್ಮಾರಕ್ಕೆ ಬಂದು ಪೂಜೆ ಸಲ್ಲಿಸಿ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಸ್ಮಾರಕ ಬಳಿ ರಕ್ತದಾನ, ಅನ್ನದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಅಪ್ಪು ನಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಕರುನಾಡಿಗರ ಮನದಲ್ಲಿ ಅಚ್ಚುಳಿದ್ದಾರೆ.

ಅಭಿಮಾನಿಗಳ ಒತ್ತಾಯದ ಮೆರೆಗೆ ʼಜಾಕಿʼ ಸಿನಿಮಾವನ್ನು ರೀ ರಿಲೀಸ್ ಮಾಡಲಾಗಿತ್ತು. ಹದಿನಾಲ್ಕು ವರ್ಷದ ಹಿಂದೆಯೇ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಟ್ರೆಂಡ್ ಕ್ರೀಯೆಟ್ ಮಾಡಿತ್ತು.
ಆದರೆ ಇತ್ತಿಚೇಗೆ ಜಾಕಿ ಸಿನಿಮಾ ರೀ ರೀಲಿಸ್ ಆದರೂ ಅಭಿಮಾನಿಗಳು ಅಷ್ಟೇ ಪ್ರೀತಿಯಿಂದ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲೂ ಎಲ್ಲರಿಗೂ ಸ್ಪೂರ್ತಿ. ಆದರೆ ಅಪ್ಪು ನಮ್ಮೊಂದಿಗೆ ದೈಹಿಕವಾಗಿಲ್ಲಇಲ್ಲ ಎನ್ನುವುದೇ ನೋವಿನ ಸಂಗತಿ. ಸಿನಿಮಾ, ಡ್ಯಾನ್ಸ್, ಸರಳತೆ, ಬಡವರ ಪಾಲಿನ ಅರಸ, ಪರಮಾತ್ಮ ಅಂತ ಯಾರಾದರೂ ಇದ್ದರೇ ಅದು ಅಪ್ಪು ಮಾತ್ರ.
