ಅಪ್ಪು ಪಪ್ಪು ಸಿನಿಮಾದ ನಿರ್ಮಾಪಕ ಸೌಂದರ್ಯ ಜಗದೀಶ್ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣವೇನು ಎಂಬುದು ಬಹಿರಂಗವಾಗಿಲ್ಲ.
ಕನ್ನಡ ಚಿತ್ರರಂಗದ ಜೊತೆ ಸೌಂದರ್ಯ ಜಗದೀಶ್ ಅತ್ಯುತ್ತಮ ಒಡನಾಟ ಹೊಂದಿದ್ದರು. ಮಸ್ತ್ ಮಜಾ ಮಾಡಿ’ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗಿದ್ರು. ಆನಂತರ ಪುತ್ರನಿಗಾಗಿ ‘ಅಪ್ಪು ಪಪ್ಪು’ ಸಿನಿಮಾವನ್ನು ನಿರ್ಮಾಣ ಮಾಡಿ ಸಾಕಷ್ಟು ಜನಪ್ರಿಯರಾದರು.
ಹಾಗೆಯೇ ಇತ್ತಿಚೇಗೆ ‘ಸ್ನೇಹಿತರು’, ‘ರಾಮ್ ಲೀಲಾ’ ಸಿನಿಮಾಗಳನ್ನು ಕೂಡ ಸೌಂದರ್ಯ ಜಗದೀಶ್ ನಿರ್ಮಾಣ ಮಾಡಿದ್ದರು. ಇವರು ಕನ್ನಡ ಚಿತ್ರರಂಗದಲ್ಲಿ ಇದ್ದು ಸಾಧಿಸಬೇಕಾದದ್ದು ಇನ್ನೂ ಹಲವು ವರ್ಷಗಳೇ ಇದ್ದವು ಅಷ್ಟೋತ್ತಿಗಾಗಲೇ ಜಗದೀಶ್ ಆತ್ಮಹತ್ಯೆಗೆ ಶರಣಾಗಿದ್ದು ಚಿತ್ರೋದ್ಯಮಕ್ಕೆ ಆಘಾತ ನೀಡಿದೆ.