ಮುಂಬೈ ; ಅನಧಿಕೃತವಾಗಿ , IPL , 2023 (ಸೀಸನ್ 16)ರ ಪಂದ್ಯವನ್ನ ,ಬೆಟ್ಟಿಂಗ್ ಅಪ್ಲಿಕೇಶನ್ ಫೇರ್ ಪ್ಲೇ ಅಪ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡೋ ಮೂಲಕ, ವೈಯಾಕ೦ 18 ಸಂಸ್ಥೆಗೆ ಕೊಟ್ಯಾ೦ತರ ರೂಪಾಯಿ ನಷ್ಟ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೇ ಮುಂಬೈ ಸೈಬರ್ ಪೊಲೀಸರು ಸಮನ್ಸ್ ನೀಡಿದ್ದಾರೆ.

ಏಪ್ರಿಲ್ 29ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಸೈಬರ್ ಪೊಲೀಸರು ಸೂಚಿಸಿದ್ದಾರೆ. ಈ ಸಂಬಂಧ ಬಾಲಿವುಡ್ ನಟ ಸಂಜಯ್ ದತ್ತ್ ಗೂ ಮುಂಬೈ ಸೈಬರ್ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು. ಆದ್ರೆ ಅವ್ರು ವಿದೇಶ ಪ್ರವಾಸದಲ್ಲಿರೋದ್ರಿಂದ ವಿಚಾರಣೆಗೆ ಬೇರೆ ದಿನಾಂಕ ಮತ್ತು ಸಮಯಗೆ ಮನವಿ ಸಲ್ಲಿಸಿದ್ದಾರಂತೆ. ಏನಿದು ಪ್ರಕರಣ? 2023 ರ IPL ಪಂದ್ಯದ ಓಟಿಟಿ ಹಕ್ಕು ಜಿಯೋ ಸಿನಿಮಾದ ಬಳಿ ಇತ್ತು. ಈ ವೇಳೆ ತಮನ್ನಾ , ಬ್ರಾಡ್ ಕಾಸ್ಟಿಂಗ್ ಹಕ್ಕು ಪಡೆಯದೆ IPL ಪಂದ್ಯವನ್ನ ಫೇರ್ ಪ್ಲೇ ಅಪ್ ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದರು. ಇದ್ರಿಂದ ವೈಯಾಕ೦ 18 ಸಂಸ್ಥೆಗೆ , 100 ಕೋಟಿಗೂ ಅಧಿಕ ರೂಪಾಯಿ ನಷ್ಟವಾಗಿತ್ತು ಅಂತ, ಸಂಸ್ಥೆ ದೂರು ದಾಖಲಿಸಿತ್ತು. ಈ ಅಪ್ ನ ಪ್ರಚಾರ ರಾಯಭಾರಿ ತಮನ್ನಾ ಕೂಡ ಆಗಿದ್ರು. ಈ ಆರೋಪಕ್ಕೆ ಸಂಭಂಧಪಟ್ಟಂತೆ ಮುಂಬೈ ಸೈಬರ್ ಪೊಲೀಸರು ತಮನ್ನಾಗೆ ಸಮನ್ಸ್ ಜಾರಿ ಮಾಡಿದ್ದಾರೆ.