ಸ್ಯಾಂಡಲ್ ವುಡ್ ನಲ್ಲಿ ಅದೆಷ್ಟೋ ಹಳೆ ಸಿನಿಮಾಗಳು ರೀ ರಿಲೀಸ್ ಆಗುತ್ತಿವೆ. ಇತ್ತೀಚೆಗಷ್ಟೇ ದಿವಂಗತ ಪುನೀತ್ ರಾಜಕುಮಾರ ಅವರ ಜಾಕಿ ಚಿತ್ರ ರೀ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡ್ತಿತ್ತು. ಈಗ ಇದೆ ಸಾಲಿಗೆ ಉಪೇಂದ್ರರ ಸಿನಿಮಾವೊ೦ದು ಸೇರ್ಪಡೆಯಾಗ್ತಿದೆ. ಉಪೇಂದ್ರ ಮೊದಲ ಬಾರಿಗೆ ಫುಲ್ ಫ್ಲೆಡ್ಜ್ ನಾಯಕ ನಟನಾಗಿ ನಟಿಸಿದ್ದ , ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ “ಎ” ಸಿನಿಮಾ ಮತ್ತೆ ರೀ ರಿಲೀಸ್ ಆಗುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷತೆ ಅಂದರೆ 1998 ರಲ್ಲಿ ಉಪೇಂದ್ರ ಈ ಚಿತ್ರವನ್ನು ತಾವೇ ನಿರ್ದೇಶನ ಮಾಡಿ, ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.
ಐಪಿಎಲ್ ಹಾಗು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಹೊಸ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಹೀಗಾಗಿ ಹೊಸ ಸಿನಿಮಾಗಳಿಲ್ಲದೆ ಸ್ಟಾರ್ ಹೀರೋಗಳ ಕ್ಲಾಸಿಕ್ ಸಿನಿಮಾಗಳನ್ನೇ ರೀ ರಿಲೀಸ್ ಮಾಡ್ತಿರೋ ನಿರ್ಮಾಪಕರು ನಿನ್ನೇ ಅಷ್ಟೇ ಪುನೀತ್ ರಾಜಕುಮಾರ್ ಅವರ ಅಂಜನಿಪುತ್ರ ಹಾಗು ಪವರ್ ಸಿನಿಮಾ ರೀ ರಿಲೀಸ್ ಮಾಡಿದ್ರು .ಇದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕಂದರೆ ಒಂದೇ ದಿನ ಎರಡು ಸಿನಿಮಾಗಳನ್ನು ಹೇಗೆ ನೋಡೋದು ಅಂತ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು.
ಇದೀಗ ಮುಂದಿನ ವಾರ ಇನ್ನೊಂದು ಬ್ಲಾಕ್ ಬಸ್ಟರ್ ಚಿತ್ರ ರೀ ರಿಲೀಸ್ ಆಗಲು ರೆಡಿಯಾಗಿದೆ. ಉಪೇಂದ್ರರ ಬ್ಲಾಕ್ ಬಸ್ಟರ್ ಹಿಟ್ ‘ಎ’ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಇದೇ ಮೇ 17 ಕ್ಕೆ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. “ಎ” ಮೂವಿ ಕಮಿಂಗೂ ಸೂನ್ ಅಂತ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಡಿದ್ದಾರೆ. ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತೆ ಅಂತ ಅಭಿಮಾನಿಗಳು ಕಾತರದಿಂದ ಕಾಯ್ತಾ ಇದಾರೆ. ಒಟ್ನಲ್ಲಿ ಸ್ಯಾಂಡಲ್ ವುಡ್ ನಲ್ಲಿ ರೀ ರಿಲೀಸ್ ಪರ್ವ ಶುರುವಾಗಿದ್ದು, ಹೊಸ ಸಿನಿಮಾಗಳಿಗಿಂತ ಹಳೆ ಸಿನಿಮಾಗಳ ಭರಾಟೆಯೇ ಜೋರಾಗಿದೆ.