ಹಾಸನ : ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲು ಸೇರಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ. ಇದೀಗ ಹೊಳೆನರಸೀಪುರ JMFC ಕೋರ್ಟ್ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ನಾಳೆ ಬೆಳಿಗ್ಗೆ 9 ರಿಂದ ಮೇ16ರ ರಾತ್ರಿ ಅವರಿಗೆ ಪೊಲೀಸ್ ಕಸ್ಟಡಿಗೆ ಆದೇಶ ಹೊರಡಿಸಿದೆ.
ವಕೀಲ ದೇವರಾಜೇಗೌಡ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಗಿದ್ದಾರೆ ಎಂದು ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆ ನಡೆಯಿಸಿದ ಹೊಳೆನರಸೀಪುರ ಜೆಎಂಎಫ್ ಸಿ ಕೋರ್ಟ್ ನ್ಯಾಯಾಧೀಶ ಪ್ರವೀಣ್ ದೇವರಾಜ ಗೌಡಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ತಮ್ಮ ಬಂಧನದ ಸುಳಿವು ಸಿಗುತ್ತಿದ್ದಂತೆ ಪರಾರಿಯಾಗಲು ದೇವರಾಜೇಗೌಡ ಯತ್ನಿಸಿದ್ದು, ಅವರ ಮೊಬೈಲ್ ಲೊಕೇಶನ್ ಆಧರಿಸಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಸಮೀಪ ಅವರನ್ನು ಬಂಧಿಸಲಾಗಿತ್ತು. ಇದೀಗ ಹಳೆ ನರಸೀಪುರ ಜೆಎಂಎಫ್ ಸಿ ಕೋರ್ಟ್ ದೇವರಾಜ ಗೌಡಗೆ ಮೂರು ದಿನ ಪೊಲೀಸ್ ಕಸ್ಟಡರಿಗೆ ನೀಡಿ ಆದೇಶ ಹೊರಡಿಸಿದೆ ನಾಳೆ ಬೆಳಗ್ಗೆ 9 ರಿಂದ ಮೇ ಹದಿನಾರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶ ಪ್ರವೀಣ್ ಆದೇಶ ಹೊರಡಿಸಿದ್ದಾರೆ.