ಹಾಸನ ಪೆನ್‌ಡ್ರೈವ್ ಪ್ರಕರಣ ಸಂಬಂಧ ಈಗಾಗಲೇ ಕಾನೂನು ಸಂಕಷ್ಟಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಇದೀಗ ಮತ್ತೊಂದು ಅತ್ಯಾಚಾರದ ಕೇಸ್ ದಾಖಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಕಡ ತೋಟದ ಮನೆಯಲ್ಲಿ ಸಂತ್ರಸ್ತೆ ಕೆಲಸ ಮಾಡೋ ವೇಳೆ ಪ್ರಜ್ವಲ್ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ನಿನ್ನೆ ಸಂತ್ರಸ್ತೆಯನ್ನು ಗನ್ನಿಕಡ ತೋಟದ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ.
ಪ್ರಜ್ವಲ್ ವಿರುದ್ಧ ಮೂರನೇ ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದೀಗ ಎಸ್‌ಐಟಿ ಒಂದಕ್ಕಿಂತ ಒಂದು ಕಠಿಣ ಕೇಸ್‌ಗಳನ್ನ ದಾಖಲಿಸಿದ್ದು, ಪ್ರಜ್ವಲ್‌ಗೆ ಕಾನೂನು ಉರುಳು ಬಿಗಿಯಾಗುತ್ತಿದೆ. ಅತ್ತ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ನನ್ನು ಬಂಧಿಸಿ ಕರೆತರಲು ಎಸ್ಐಟಿ ಕಾರ್ಯಪ್ರವೃತ್ತವಾಗಿದೆ.