ಮಾಂಸಕ್ಕಾಗಿ ಕಾಡೆಮ್ಮೆಯನ್ನು ಶೂಟ್‌ಔಟ್ ಮಾಡಿದ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಹಾಸನ; ಸಕಲೇಶಪುರ ತಾಲೂಕಿನ ಹೊಸೂರು ಎಸ್ಟೇಟ್‌ನ ಉಮೇಶ್ ಹಾಗೂ ರವಿ ಎಂಬುವರು ಮಾಂಸ ತಿನ್ನುವ ದುರಾಸೆಯಿಂದ ಕಾಡಮ್ಮೆಗೆ ಗುರಿ ಇಟ್ಟು ಬಂದೂಕಿನಿಂದ ಶೂಟ್‌ಔಟ್ ಮಾಡಿ ಭರ್ಜರಿ ಭೋಜನದ ಕನಸು ಕಂಡಿದ್ದರು.

ಆದರೆ ಅದೇ ವೇಳೆ ಕಾಡೆಮ್ಮೆ ಶೂಟ್‌ಔಟ್ ಬಗ್ಗೆ ಮಾಹಿತಿ ತಿಳಿದ ವಲಯ ಅರಣ್ಯಾಧಿಕಾರಿ ದಾಳಿ ನಡೆಸಿದ್ದಾರೆ.

ಕಾಡೆಮ್ಮೆಯ ಸುಮಾರು 10 ಕೆಜಿ ಮಾಂಸ ವಶಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಮಧು, ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ವಲಯ ಅರಣ್ಯಾಧಿಕಾರಿ ಶಿಲ್ಪಾ ತಂಡದ ನೇತೃತ್ವದಲ್ಲಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
̲- ಕಾವ್ಯಶ್ರೀ ಕಲ್ಮನೆ