ಮಡಿಕೇರಿ : ಬಾಂಗ್ಲಾದೇಶದಲ್ಲಾಗಿರುವ ವಿದ್ಯಮಾನಗಳಿಂದ ಅಸ್ಸಾಂ ಮೂಲದವರು ಅಂತ ಹೇಳಿಕೊಂಡು ಕೊಡಗಿಗೆ ಕಾರ್ಮಿಕರು ಆಗಮಿಸುತ್ತಿದ್ದಾರೆಂಬ ಮಾತುಗಳು ಕೇಳಿಬಂದಿದ್ದು, ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ. ಈ ಬಗ್ಗೆ ಆತಂಕಕ್ಕೊಳಗಾಗದಂತೆ ಕೊಡಗು ಎಸ್ಪಿ ಕೆ.ರಾಮರಾಜನ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಬಾಂಗ್ಲಾದೇಶದವರು ಕಂಡುಬಂದಲ್ಲಿ ತಕ್ಷಣ ಅವರನ್ನು ಭಾರತದಿಂದ ಹೊರ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು. ತೋಟ ಕೆಲಸಕ್ಕೆಂದು ಬರುವ ಕಾರ್ಮಿಕರ ಪೂರ್ವಾಪರ ತಿಳಿದುಕೊಳ್ಳಬೇಕು. ವೋಟರ್ ಐಡಿ, ಆಧಾರ್ ಕಾರ್ಡ್ ಪಡೆದುಕೊಳ್ಳುವುದು ಉತ್ತಮ. ಈ ಬಗ್ಗೆ ತೋಟದ ಮಾಲೀಕರೇ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವ್ರು, ಒಂದೆರಡು ದಿನಕ್ಕೆಂದು ಕೆಲಸಕ್ಕೆ ಬಂದರೂ ಅವರ ಗುರುತಿನ ಚೀಟಿ ಪಡೆದುಕೊಳ್ಳಬೇಕು. ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು. ಇದರಿಂದ ಮುಂದೆ ಅಪರಾಧ ನಡೆದಲ್ಲಿ ಅವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಅಪರಾಧ ಪ್ರಕರಣದಲ್ಲಿ ಹೊರಗಿನವರು ಭಾಗಿಯಾಗಿರುವುದು ಪತ್ತೆಯಾದಲ್ಲಿ ಅವರಿಗೆ ನೆಲೆ ಕಲ್ಪಿಸಿರುವ ಮಾಲೀಕರ ಬಳಿ ಕಾರ್ಮಿಕರ ಮಾಹಿತಿ ಇಲ್ಲದಿದ್ರೆ ಮಾಲೀಕರನ್ನು ಸೇರಿಸಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.
ದೇಶದ ಗಡಿಯಲ್ಲಿ ಸೇನೆ, ಗಡಿ ಭದ್ರತಾ ಪಡೆಯಿಂದ ತಪಾಸಣೆ ನಡೆಯುತ್ತಿದೆ. ಬಾಂಗ್ಲಾದೇಶಿಗರನ್ನು ಅಲ್ಲಿಂದಲೇ ವಾಪಾಸ್ ಕಳುಹಿಸಲಾಗುತ್ತದೆ. ಹೀಗಿದ್ದರೂ ಜಿಲ್ಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
ಅಸ್ಸಾಂ ಕಾರ್ಮಿಕರ ದಾಖಲೆ ಇಲ್ಲದಿದ್ದರೆ ತೋಟ ಮಾಲೀಕರ ವಿರುದ್ಧ ಕ್ರಮ – ಎಸ್ಪಿ ಎಚ್ಚರಿಕೆ
RELATED ARTICLES