ರಾಮನಗರ: ಕಳ್ಳತನ ಮಾಡಿ ಸಿಕ್ಕಿಹಾಕಿಕೊಳ್ಳಬಾರದೆಂದು ಖದೀಮರು ಒಂದಲ್ಲೊಂದು ಉಪಾಯ ಹುಡುಕುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಸೀರೆಯುಟ್ಟು ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿ, ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮಣ್ಣಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಣ್ಣಿಗನಹಳ್ಳಿ ಗ್ರಾಮದ ಶಶಿ ಬಂಧಿತ ಆರೋಪಿಯಾಗಿದ್ದು. ಪೊಲೀಸರಿಗೆ ಸುಳಿವು ಸಿಗಬಾರದು ಎಂದು ಉಪಾಯ ಮಾಡಿ ಸೀರೆಯುಟ್ಟು ಕಳ್ಳತನ ಮಾಡಲು ಮುಂದಾಗಿದ್ದು ಆದರೂ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ.
ಆರೋಪಿಯು ಸೀರೆಯುಟ್ಟು ಗ್ರಾಮದ ಶನೇಶ್ವರ ದೇವಾಲಯದಲ್ಲಿ ಕಳ್ಳತನ ಮಾಡಲು ಬಂದಿದ್ದ ಹಾಗೆ ಕಬ್ಬಿಣದ ಸಲಾಕೆಯಿಂದ ದೇವಾಲಯ ಬಾಗಿಲು ಮುರಿಯಲು ಯತ್ನಿಸಿ, ಸಾಧ್ಯವಾಗದಿದ್ದಾಗ ಕಿಟಕಿಯನ್ನೇ ಮುರಿದು ಹೋಗಿದ್ದಾನೆ.
ಕಳ್ಳತನಕ್ಕೆ ಯತ್ನಿಸಿದ ದೃಶ್ಯ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಘಟನಾ ಸಂಬಂಧ ದೇವಾಲಯದ ಆಡಳಿತ ಮಂಡಳಿಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನ ಆಧರಿಸಿ ಕಳ್ಳನನ್ನು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.