ಚಿಕ್ಕಮಗಳೂರು : ಮರಗಸಿ ಮಾಡುವಾಗ ಕಾಲು ಜಾರಿ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ನೆರಡಿ ಗ್ರಾಮದ ಅಂಬಿಕಾ ಎಸ್ಟೇಟ್ ನಲ್ಲಿ ನಡೆದಿದೆ.
ಹೌದು .. ಕಾರ್ಮಿಕ ಲಿಂಗಪ್ಪ ಮೃತ ದುರ್ದೈವಿ. ಎಸ್ಟೇಟ್ ನಲ್ಲಿ ಕೆಲಸ ಮಾಡುವಾಗ 30 ಅಡಿ ಮರ ಹತ್ತಿ ಮರಗಸಿ ಮಾಡುವಾಗ ಕಾಲು ಜಾರಿ ಬಿದ್ದಿದ್ದಾರೆ.
ತೋಟದ ಮಾಲೀಕ ದಯಾನಂದ ಶೆಟ್ಟಿ ಮರಗೆಲಸ ಮಾಡುವವರಿಗೆ ಯಾವುದೇ ರೀತಿಯ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಹಾಗೆ ಮರ ಹತ್ತಲು ಬೇಕಾದ ಸೂಕ್ತ ಸಲಕರಣೆಗಳನ್ನು ಸಹ ಬಳಸಿಲ್ಲ ಎಂ ಆರೋಪ ಕೇಳಿ ಬಂದಿದ್ದು . ಮಾಲೀಕರ ನಿರ್ಲಕ್ಷ್ಯದಿಂದಲೇ ಸತ್ತಿದ್ದು ಎಂದು ಮೃತ ಲಿಂಗಪ್ಪ ಅಳಿಯ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ತೋಟದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾಎಮಿಕರ ಸುರಕ್ಷತೆ ವಿಷಯದಲ್ಲಿ ಮಾಲೀಕರು ಬೇಜವಾನ್ದಾರಿ ತೋರಿದ್ದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
