ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್ʼನಿಂದ ಮನೆ ಹೊತ್ತಿ ಉರಿದಿರುವ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದೆ.

ಉಮರ್ ಫಾರೂಕಿ ಎಂಬುವರ ಮನೆಯಲ್ಲಿ ವಾಷಿಂಗ್ ಮೆಷಿನ್ ಫ್ಲಗ್ʼನಲ್ಲಿ ಶಾರ್ಟ್ ಸರ್ಕ್ಯೂಟ್ʼನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸೀಲಿಂಗ್ ಫ್ಯಾನ್ ಸೇರಿದಂತೆ ಗೃಹಪಯೋಗಿ ವಸ್ತುಗಳಿಗೆ ಹಾನಿ ಉಂಟಾಗಿದೆ.

ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮನೆ ಮಂದಿ ಎಚ್ಚೆತ್ತುಕೊಂಡು ಅಗ್ನಿಶಾಮಕ ಸಿಬ್ಬಂದೊಗೆ ಫೋನ್ ಮಾಡಿದ ತಕ್ಷಣ ಸಿಬ್ಬಂದಿಗಳು ಆಗಮಿಸಿದೊಡ್ಡ ಅನಾಹುತ ಆಗೋದನ್ನ ತಡೆದಿದ್ದಾರೆ.ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.