ಚಿಕ್ಕಮಗಳೂರು : ತಂದೆ ತಾಯಿಗಳು ದೇವರ ಸಮಾನ ಅಂತಾರೆ ಆದರೆ ಕಾಫಿನಾಡಿನಲ್ಲಿ ಹೃದಯವಿದ್ರಾವಕ ನಡೆದಿರೋ ಘಟನೆ ನೋಡಿದ್ರೆ ಬೆಚ್ಚಿಬೀಳಿಸುತ್ತೆ. ಸ್ವಂತ ಮಗನೇ ತಾಯಿಯನ್ನ ಕೊಂದು ಸುಟ್ಟು ಹಾಕಿದ ಪ್ರಕರಣ ಒಂದು ಕಡೆಯಾದ್ರೆ ಅದೇ ಮಗ ತಿಂಗಳ ಹಿಂದೆ ಅಪ್ಪನಿಗೆ ಚರ್ಮ ಸುಲಿಯುವಂತೆ ಹೊಡೆದಿದ್ದು ಇನ್ನೊಂದು ರೀತಿಯಾಗಿದೆ. ಇದು ನಡೆದಿದ್ದು ಆಲ್ದೂರು ತಾಲೂಕಿನ ಅರೆನೂರಿನ ಹಕ್ಕಿಮಕ್ಕಿ ಗ್ರಾಮದಲ್ಲಿ ನಾವು ನೋಡಬಹುದು.
ಹೌದು .. ಇಂತಹಾ ಮಕ್ಕಳು ಹುಟ್ಟೋದ್ಕಿಂತ, ಹುಟ್ದೆ ಇರೋದೇ ಒಳ್ಳೆಯದು ಅಂತಾ ಅನಿಸೋದು ಸಹಜ. ಅಪ್ಪ ಅಮ್ಮ ದೇವರು ಅಂತ ಹೇಳುತ್ತಾರೆ ಆದ್ರೆ ಕುಟಿಯೋ ಚಟ ಇರುವ ಮಗ ಇದರಷ್ಟು ಬಿಟ್ರೆಷ್ಟು ಅಂತ ಅನಿಸುತ್ತದೆ.
ಬುಧವಾರ ರಾತ್ರಿ ಹೆತ್ತ ಮಗನೇ ತಾಯಿಯನ್ನು ಬರ್ಬರವಾಗಿ ಕೊಂದು ಶವವನ್ನು ಅರ್ಧಂಬರ್ಧ ಸುಟ್ಟು ಶವದ ಪಕ್ಕದಲ್ಲಿ ಮಗ ಮಲಗಿದ್ದಾನೆ ನಂತರ ಅಪ್ಪನ ಮೇಲೂ ಮೃಗೀಯ ವರ್ತನೆ ತೋರಿರುವ ಪಾಪಿ ಪುತ್ರ ಪವನ್.
ಲೆದರ್ ಬೆಲ್ಟ್ ನಲ್ಲಿ ಅಪ್ಪ ಸೋಮೇಗೌಡ ಎಂಬುವರಿಗೆ ಬೆನ್ನಿನ ಚರ್ಮ ಸುಲಿಯುವಂತೆ ಹೊಡೆದಿದ್ದು ಈ ನತದೃಷ್ಟ ಅಪ್ಪನ ಬೆನ್ನಿನ ಸ್ಥಿತಿ ನೋಡಿದ್ರೆ ಎಂಥವರ ಕಣ್ಣಲ್ಲೂ ನೀರು ಬರೋದು ಗ್ಯಾರಂಟಿ
ನಿತ್ಯ ಕೂಲಿ ಮಾಡೋದು ಸಂಜೆ ಕುಡಿದು ಬಂದು ಅಪ್ಪ-ಅಮ್ಮನನ್ನ ಹೊಡೆಯೋದೇ ಇವನ ಕಾಯಕ ಮಾಡಿಕೊಂಡಿದ್ದು ಆದರೆ ಮಗನೆಂಬ ಮಮಕಾರದಿಂದ ಯಾರಿಗೂ ಹೇಳದೆ ನೋವು ಅನುಭವಿಸುತ್ತಿದ್ದ ಈ ಹೆತ್ತವರು ನೋವು ಯಾರಿಗೂ ಹೇಳಲು ಅಸಾಧ್ಯವಾಗಿದೆ.
ಈ ವಿಷಯ ತಿಳಿದ ಅಕ್ಕಪಕ್ಕದವರು ಹಲವು ಬಾರಿ ಪಾಪಿ ಪುತ್ರ ಪವನ್ ಗೆ ಬುದ್ಧಿ ಹೇಳಿದ್ದರು ಅವರ ಮಾತಿಗೆ ಸುತಾರಾಂ ಜಗ್ಗದೆ ಅಪ್ಪ-ಅಮ್ಮನನ್ನ ಹೊಡೆಯೋದೇ ಇವನ ಕಾಯಕ ಮಾಡಿಕೊಂಡಿದ್ದ. ತಾಯಿ ಕೊಂದು ಸುಟ್ಟು ಹಾಕಿದ್ರಿಂದ ಪೊಲೀಸರ ಅತಿಥಿಯಾಗಿರೋ ಪಾಪಿ ಮಗ ಈಗ ಅಪ್ಪನ ಹೊಡೆದಿದ್ದರಿಂದ ಜೈಲಲ್ಲೇ ಕೊಳೆಯುವ ಹಾಗೆ ಮಾಡೋದು ಒಳ್ಳೆಯದು .