ಚಿಕ್ಕಮಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜಗಳ ಬಿಡಿಸಲು ಹೋದ ಹೆಡ್ ಕಾನ್ಸ್ಟೇಬಲ್ ಮೇಲೆ ಡ್ಯಾಗರ್ ನಿಂದ ಹಲ್ಲೆ ನಡೆಸಿರುವ ಘಟನೆಮಾಸುವ ಮುನ್ನವೇ , ಹೆತ್ತ ಮಗ ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ ನನ್ನನ್ನು ಕಾಪಾಡಿ ಎಂದು 112ಕ್ಕೆ ಕರೆ ಮಾಡಿದ ಮಹಿಳೆ ರಕ್ಷಣೆಗೆ ಹೋಗಿದ್ದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆದಿರುವ ಘಟನೆ ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ನಡೆದಿದೆ.

ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿನೇಶ್ ಕುಮಾರ್ ಎಂಬವರು ಬುಧವಾರ ರಾತ್ರಿ 112 ವಾಹನದಲ್ಲಿ ಕರ್ತವ್ಯದಲ್ಲಿ ಇರಬೇಕಾದರೆ ನಗರದ ಉಪ್ಪಳ್ಳಿಯ ನಿವಾಸಿ ಅಕ್ತರ್ ಉನ್ನಿಸಾ ಎಂಬುವವರು ತಮ್ಮ ಮನೆಯಲ್ಲಿ ಜಗಳವಾಗುತ್ತಿರುವ ಕುರಿತು 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಂಟ್ರೋಲ್ ರೂಮ್ ನಿಂದ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಹೆಡ್ ಕಾನ್ಸ್ಟೇಬಲ್ ದಿನೇಶ್ ಕುಮಾರ್ ಗಲಾಟೆಯ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಅಕ್ತರ್ ಉನ್ನಿಸ್ ಪುತ್ರ ಮೊಹಮ್ಮದ್ ಜಾಫರ್ ಏಕಾಏಕಿ ನಿಂದಿಸಿ ಹೆಡ್ ಕಾನ್ಸ್ಟೇಬಲ್ ದಿನೇಶ್ ಕುಮಾರ್ ಅವರ ಸಮವಸ್ತ್ರ ಹಿಡಿದು ಎಳೆದಾಡಿ ಹೂವಿನ ಪಾಟ್ ನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಈ ವೇಳೆ ದಿನೇಶ್ ಕುಮಾರ್ ಜೊತೆಲಿದ್ದ ವಾಹನ ಚಾಲಕ ಅಣ್ಣಪ್ಪ ಗಲಾಟೆ ಬಿಡಿಸಿದ್ದಾರೆ. ಗಾಯಗೊಂಡ ದಿನೇಶ್ ಕುಮಾರ್ ನನ್ನ ಜಿಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆ ನಡೆಸಿದ ಮೊಹಮ್ಮದ್ ಜಾಫರ್ ಸಾಧಿಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ಕಾರಣವಾಗಿದೆ