ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರು ಸಿಗರೇಟ್ ಸೇದುತ್ತ ಕುಳಿತಿದ್ದ ಫೋಟೋ ಹಾಗೂ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಜೈಲಾಧಿಕಾರಿ ಸೇರಿದಂತೆ ಒಟ್ಟು 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಜೈಲಿನ 7 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ.ಜೈಲರ್ ಗಳಾದ ಶರಣಬಸವ ಅಮಿನಗಡ ಖಂಡೇವಾಲ್, ಸಹಾಯಕ ಜೈಲರ್ಗಳಾದ ಪುಟ್ಟಸ್ವಾಮಿ, ಶ್ರೀಕಾಂತ್ ತಳವಾರ್, ಜೈಲಿನ ಹೆಡ್ ವಾರ್ಡರ್ಗಳಾದ ವೆಂಕಪ್ಪ, ಸಂಪತ್, ಬಸಪ್ಪನನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತು ನಿನ್ನೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸದ್ದೆ. ಅವರು ಎಲ್ಲಾ ತನಿಖೆ ಮಾಡಿದ್ದಾರೆ ತನಿಖೆ ಮಾಡಿ ಸುಮಾರು 1 ಗಂಟೆಯವರೆಗೂ ತನಿಖೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.ಅವರಿಗೆ ಆ ರೀತಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ವರದಿ ಬಂದಿದೆ.ಅದರ ಪ್ರಕಾರ ಈಗ 7 ಜನ ಅಮಾನತು ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆಮೇಲೆ ಹಿರಿಯ ಅಧಿಕಾರಿಗಳು ಯಾರಿದ್ದಾರೆ ಅವ ಅಲ್ಲಿಂದ ಅವರನ್ನು ವರ್ಗಾವಣೆ ಮಾಡಲಾಗುತ್ತದೆ.

ವರದಿ ಬಂದ ತಕ್ಷಣ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತವೆ ಪದೇ ಪದೇ ಈ ರೀತಿ ಆಗಬಾರದು ರಾಜ್ಯದಲ್ಲಿರುವಂತಹ ಎಲ್ಲ ಬಂಧಿ ಖಾನೆಗಳಲ್ಲೂ ಕೂಡ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತದೆ.ಎಲ್ಲ ಜೈಲಿನಲಿ ಜಾಮರ್ಸ್ ಗಳು ಅಳವಡಿಕೆ ಮಾಡಲಾಗಿದ್ದು, ಸಿಸಿಟಿವಿ ಕೂಡ ಅಳವಡಿಕೆ ಮಾಡಲಾಗಿದೆ ಇಷ್ಟೆಲ್ಲಾ ಆದರೂ ಕೂಡ ಈ ರೀತಿ ನಡೆಯುತ್ತಿದೆ ಅಂದರೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
