ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತೀವ್ರ ಶೋಧ ಕಾರ್ಯಕ್ಕೆ ಮುಂದಾಗಿದ್ದ ಇದರ ಬೆನ್ನಲ್ಲೇ ಮತ್ತೊಬ್ಬ ವ್ಯಕ್ತಿ ಬಂದು ಲಿಖಿತ ದೂರು ಕೊಡಲು ಮುಂದಾಗಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷಗಳ ಹಿಂದೆ ನಡೆದಿರುವ ಹುಡುಗಿಯ ಸಾವಿನ ಬಗ್ಗೆ ಟಿ. ಜಯಂತ್ ಎಂಬುವರು ಲಿಖಿತ ದೂರು ನೀಡಲು ಎಸ್ ಐಟಿ ಕಚೇರಿಗೆ ಆಗಮಿಸಿದ್ದಾರೆ.
ʼ15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೃತ ದೇಹವನ್ನು ಹೂತು ಹಾಕಿರುವುದನ್ನ ನಾನು ನೋಡಿದ್ದೇನೆ ಅಕ್ರಮವಾಗಿ ದಫನ್ ಮಾಡಲಾಗಿದೆ. ಎಸ್ ಐಟಿ ತಂಡದ ವಿಶ್ವಾಸ ಮೇರೆಗೆ ನಾನು ಈಗ ಬಂದು ಇಲ್ಲಿ ದೂರು ಕೊಡಲು ಮುಂದಾಗಿದ್ದೇನೆ ತನಿಖಾ ತಂಡಕ್ಕೆ ಆ ಜಾಗವನ್ನು ತೋರಿಸಿಕೊಡುತ್ತೇನೆ ಎಂದು ಅವರು ಹೇಳಿದ್ದಾರೆʼ.
ದೂರು ನೀಡಿದ ಬಳಿಕ ಎಸ್ ಪಿ ಜಿತೇಂದ್ರ ದಯಮ ಅವರೊಂದಿಗೆ ಶೋಧ ಕಾರ್ಯಕ್ಕೆ ತೆರಳಿದ್ದಾರೆ.