ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಅಂತಿಮ ಘಟ್ಟಕ್ಕೆ ಬಂದು ತಲುಪಿದಂತಿದೆ. ಇಂದು ಒಂದು ಲೆಕ್ಕದಲ್ಲಿ ಫೈನಲ್ ಡೇ, ಬಿಗ್ ಡೇ ಆಗೋ ಸಾಧ್ಯತೆ ಇದೆ. ಪಾಯಿಂಟ್ ನಂಬರ್ 13 ಅಂದ್ರೆ ಮುಸುಕುಧಾರಿ ತೋರಿಸಿದ ಕೊನೆಯ ಪಾಯಿಂಟ್‌ನಲ್ಲಿ ಶವದ ಶೋಧ ಕಾರ್ಯ ನಡೆಯಲಿದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದ ತನಿಖೆ ಬಹಳ ಬಿರುಸಿನಿಂದ ಸಾಗುತ್ತಿದೆ. ಈಗಾಗಲೇ ಅನಾಮಿಕ ದೂರುದಾರ ಗುರುತಿಸಿದ 13ರ ಪೈಕಿ 12 ಪಾಯಿಂಟ್‌ಗಳಲ್ಲಿ ಶೋಧ ಕಾರ್ಯ ನಡೆದಿದೆ. 12 ಪಾಯಿಂಟ್‌ನಲ್ಲೂ ಏನೂ ಸಿಗದಿದ್ದು, ಇನ್ನು ಉಳಿದಿರುವುದು ಒಂದೇ ಒಂದು ಪಾಯಿಂಟ್. ಇವತ್ತು ಒಂದು ಲೆಕ್ಕದಲ್ಲಿ ಫೈನಲ್ ಡೇ ಆಗುವ ಸಾಧ್ಯತೆ ಇದೆ.
ಈವರೆಗೆ ಶೋಧ ಕಾರ್ಯ ನಡೆಸಿದ 12 ಪಾಯಿಂಟ್‌ಗಳಲ್ಲಿ ಒಂದು ಕಡೆ ಮಾತ್ರ ಮೃತದೇಹದ ಕಳೇಬರ ಸಿಕ್ಕಿದೆ. ಮತ್ತೊಂದು ಕಡೆ ಕಾಡಿನಲ್ಲಿ ಪರಿಶೀಲನೆ ನಡೆಸುವಾಗ ಎರಡು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾದ ಶವಗಳ ಮೂಳೆಗಳು ದೊರೆತಿದೆ. ಇದು ದೂರುದಾರ ಹೂತಿದ್ದಲ್ಲ, ಅಸಹಜ ಸಾವಿನ ಪ್ರಕರಣ ಎಂದು ಹೇಳಲಾಗುತ್ತಿದೆ. ಈ ನಡುವೆ ಮಂಗಳವಾರ ನಡೆದ ಎರಡು ಸಮಾಧಿಯ ಶೋಧ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ