ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದಲ್ಲಿ ನಿಗೂಢ ಶವಗಳ ರಹಸ್ಯ ಭೇದಿಸಲು ವಿಶೇಷ ತನಿಖಾ ತಂಡ ಹೊರಟಿದೆ. ದಿನಕಳೆದಂತೆ ಶವ ಶೋಧ ಕಾರ್ಯಾಚರಣೆಗೆ ತಿರುವ ಪಡೆದುಕೊಳ್ತಿದೆ. ಮುಸುಕುಧಾರಿಯ ಜೊತೆ ಕಳೆದ 10 ದಿನಗಳಿಂದ ತಲೆಬುರುಡೆ ರಹಸ್ಯದ ಜಾಡು ಹಿಡಿದು ಹೊರಟ ಎಸ್‌ಐಟಿ, 13 ಪಾಯಿಂಟ್ ಪೈಕಿ 12 ಪಾಯಿಂಟ್ ಮುಗಿಸಿದೆ. ನಿನ್ನೆ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ದೂರುದಾರನ ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿ ಕಲೆ ಹಾಕಿತ್ತು.
ಇವತ್ತು ಕೂಡ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ಎಸ್‌ಐಟಿ ಕಾರ್ಯಾಚರಣೆ ನಿಗೂಢವಾಗಿ ಸಾಗ್ತಿದೆ. 13ನೇ ಪಾಯಿಂಟ್ ಬದಲು ಹೊಸ ಸ್ಥಳ ಗುರುತು ಮಾಡಿದೆ. ಎಸ್‌ಐಟಿ ಟೀಂ ನೇರವಾಗಿ 15ನೇ ಪಾಯಿಂಟ್ ಗುರುತು ಮಾಡಿದೆ. 13ನೇ ಪಾಯಿಂಟ್‌ನಲ್ಲಿ ಶೋಧ ನಡೆಸದೇ ನೇರವಾಗಿ 15ನೇ ಪಾಯಿಂಟ್‌ಗೆ ಎಸ್‌ಐಟಿ ತಂಡ ತೆರಳಿದೆ. ತಾಂತ್ರಿಕವಾಗಿ ಬಹಳ ಸಮಸ್ಯೆ ಇರುವುದರಿಂದ ಹೊಸ ಪಾಯಿಂಟ್‌ಅನ್ನು ಗುರುತಿಸಿ ಮಹಜರು ಮಾಡುವ ಪ್ರಕ್ರಿಯೆಗೆ ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದಾಗಿದ್ದಾರೆ.
ಮುಸುಕುಧಾರಿ ಕೊಟ್ಟ ಮಾಹಿತಿ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ. ಬೊಳಿಯಾರ್ ಸಮೀಪದ ಗೋಂಕ್ರತಾರ್ ಎಂಬಲ್ಲಿ ದೂರುದಾರ 15ನೇ ಸ್ಪಾಟ್ ಗುರುತು ಮಾಡಿದ್ದು, 15 ಪಾಯಿಂಟ್ ಗುರುತಿಸುವ ಮಹಜರು ನಡೆದಿದೆ