ಶಿವಮೊಗ್ಗ : ಸಾಲಬಾಧೆಯಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೈನೆಮನೆ ಗ್ರಾದಲ್ಲಿ ನಡೆದಿದೆ.ಅಶೋಕ್ (42) ಮೃತ ರೈತ.

ಅಶೋಕ್ ಅವರಿಗೆ ಎರಡು ಎಕರೆ ಅಡಿಕೆ ತೋಟ ಇದೆ. ಅಡಿಕೆ ತೋಟದಲ್ಲಿ ಕೃಷಿಗಾಗಿ ಅಶೋಕ್ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು. ಆದರೆ ಅಡಿಕೆ ಕೊಳೆ ರೋಗದಿಂದಾಗಿ ತೀವ್ರ ನಷ್ಟ ಅನುಭವಿಸಿದ್ದರು. ಇದೀಗ ಮನನೊಂದು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
