ಬೆಂಗಳೂರು: ಇಂದು ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯುತ್ತಿದೆ. ಇದರ ಬೆನ್ನಲ್ಲೇ ಶಾಸಕ ಜಿ.ಟಿ ದೇವೇಗೌಡ ಅವರು ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ನಾನು ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇದ್ರೂ ನನ್ನ ಜೈಲಿಗೆ ಹಾಕಿದ್ದಾರೆ ಅಂತಾ ಹೆಚ್.ಡಿ ರೇವಣ್ಣ ಜಿ ಟಿ ದೇವೇಗೌಡ ಎದುರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಬಳಿಕ ಜೈಲಿನಿಂದ ಹೊರಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದಂತ ಜಿಟಿಡಿ, ನಾನು ಭೇಟಿಯಾಗಿ ಹೆಚ್.ಡಿ ರೇವಣ್ಣ ಅವರ ಕುಶಲೋಪರಿ ಚರ್ಚೆ ಮಾಡಿದೆ. ಈ ವೇಳೆಯಲ್ಲಿ ನಾನು ತಪ್ಪು ಮಾಡದಿರುವ ವಿಚಾರಕ್ಕೆ ಸಿಲುಕಿಸಿದ್ರು ಅಂತ 10 ನಿಮಿಷ ಕಣ್ಣೀರಿಟ್ಟರು ಎಂದರು.ತಪ್ಪು ಮಾಡಿದ್ರೆ ಜೈಲಿಗೆ ಹಾಕಲಿ. ಮಾಡದೇ ಇರೋ ತಪ್ಪಿಗೆ ಜೈಲಿಗೆ ಹಾಕಿದ್ದಾರೆ. ಹಳೇ ವಿಚಾರ ಮೆಲುಕು ಹಾಕಿದ್ರು. ಅವರಿಗೆ ಹಾಸನ ಅಭಿವೃದ್ಧಿಯದ್ದೇ ಚಿಂತೆ ಎಂದರು.
ತಪ್ಪು ಮಾಡದಿದ್ರೂ ಜೈಲಿಗೆ ಹಾಕಿದ್ದಾರಲ್ಲ ಅಂತ ಕೊರಗಿದೆ. ನನಗೆ ಈಗಲೂ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಚಿಂತೆ. ನಾನು ಮಹಿಳೆಯ ಜೊತೆಗೆ ಮಾತನಾಡಿಯೇ 6 ವರ್ಷಗಳಾಗಿವೆ ಎಂದು ಹೇಳಿದ್ರು ಅಂದ್ರು.ನಾನು ಹೆಚ್.ಡಿ ರೇವಣ್ಣ ಭೇಟಿಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂಬುದಾಗಿ ಕೇಂದ್ರ ಕಾರಾಗೃಹದ ಬಳಿಯಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರು ತಿಳಿಸಿದರು.